36 C
Bellary
Sunday, April 28, 2024

Localpin

spot_img

ಪ್ರಧಾನಿ ಮೋದಿ ವಾಟ್ಸಪ್ಪ್ ಸಂದೇಶ

ಬೆಳಗಾಯಿತು ವಾರ್ತೆ |www.belagayithu.in
ನವದೆಹಲಿ: ಭಾರತೀಯ ಚುನಾವಣಾ ಆಯೋಗ ಇಂದು 18ನೇ ಲೋಕಸಭಾ ಚುನಾವಣೆ ದಿನಾಂಕಗಳನ್ನು ಘೋಷಿಸಲಿದೆ. ಇದಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದ ಮೊದಲ ಸಾಲಿನಲ್ಲೇ ನನ್ನ ಪ್ರೀತಿಯ ಕುಟುಂಬ ಸದಸ್ಯರೇ ಎಂದು ದೇಶದ 140 ಕೋಟಿ ಜನತೆಯನ್ನು ಸಂಬೋಧಿಸಿರುವುದು ಮೋದಿ ಕಿ ಪರಿವಾರ್​ ಕ್ಯಾಂಪೇನ್​ ಅನ್ನು ನೆನಪಿಸುವಂತಿದೆ.
ಮೋದಿ ಪತ್ರದಲ್ಲಿರುವ ಮುಖ್ಯವಾದ 10 ಅಂಶಗಳು ಹೀಗಿವೆ
1) ಕಳೆದ 10 ವರ್ಷಗಳಲ್ಲಿ ಜನರ ಜೀವನವನ್ನು ಬದಲಿಸುವ ಕೆಲಸ ಮಾಡಿರುವುದು ತಮ್ಮ ಸರ್ಕಾರದ ದೊಡ್ಡ ಸಾಧನೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
2)ಮುಖ್ಯವಾಗಿ ನಮ್ಮ ಸರ್ಕಾರ ಬಡವರು, ರೈತರು, ಯುವಜನತೆ ಹಾಗೂ ಮಹಿಳೆಯರ ಪರವಾಗಿ ಕೆಲಸ ಮಾಡಿದೆ.
3) ಪ್ರಧಾನ ಮಂತ್ರಿ ಅವಾಸ್​​ ಯೋಜನೆ, ವಿದ್ಯುತ್​, ನೀರು, LPG ಅಗತ್ಯ ಇರುವವರನ್ನು ತಲುಪುವಂತೆ ಮಾಡಿದ್ದೇವೆ. ಆಯುಷ್ಮಾನ್​ ಯೋಜನೆ ಮೂಲಕ ಆರೋಗ್ಯದ ಕಾಳಜಿ ವಹಿಸಿದ್ದೇವೆ.
4) ನಮ್ಮ ಒಂದು ದಶಕದ ಸರ್ಕಾರ ಸಂಪ್ರದಾಯದ ಜೊತೆ ಆಧುನಿಕತೆಯನ್ನು ತೆಗೆದುಕೊಂಡು ಹೋಗಿದೆ.
5) ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೂ ಹೆಮ್ಮೆ ತರುವಂತೆ ಮಾಡಲಾಗಿದೆ.
6) ಐಸಿಹಾಸಿಕ ನಿರ್ಧಾರಗಳಾದ GST, ಆರ್ಟಿಕಲ್​ 370, ಹೊಸ ತ್ರಿವಳಿ ತಲಾಖ್​ ಕಾನೂನು, ನಾರಿಶಕ್ತಿ ವಂದನಾ ಕಾಯ್ದೆ ವಿಷಯದಲ್ಲಿ ನಮ್ಮನ್ನು ನೀವು ನಂಬಿದ್ದೀರಿ, ಬೆಂಬಲಿಸಿದ್ದೀರಿ.
7) ನಮ್ಮ ಸರ್ಕಾರದಲ್ಲಿ ಜನ ಭಾಗವಹಿಸುವಿಕೆಯನ್ನು ನಾನು ಇಲ್ಲಿ ಸ್ಮರಿಸಲೇಬೇಕು.
8) ನಮ್ಮ ಸರ್ಕಾರ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.
9) ನಿಮ್ಮ ಐಡಿಯಾ, ಸಲಹೆಗಳು, ಯೋಜನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಜನತೆಗೆ ಕರೆ ನೀಡಿದ ಮೋದಿ.
10) ದೇಶವನ್ನು ಉನ್ನತ ಮಟ್ಟಕ್ಕೆ ಹೊಯ್ಯುವ ನಿಟ್ಟಿನಲ್ಲಿ ನಾವು ಮತ್ತೆ ಮುಂದುವರೆಯಲಿದ್ದೇವೆ ಎಂಬ ವಿಶ್ವಾಸ ಇದೆ ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

ಮುಖ್ಯವಾಗಿ ಪತ್ರದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು, ಸಾಧನೆಗಳು, ಜನರ ಸಹಕಾರವನ್ನು ಉಲ್ಲೇಖಿಸಲಾಗಿದೆ. ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಕೊನೆಯಲ್ಲಿ ದೇಶ ಉಜ್ವಲ ಭವಿಷ್ಯ ಕಾಣಲಿ ಎಂದು ಹಾರೈಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles