ಬೆಳಗಾಯಿತು ವಾರ್ತೆ |www.belagayithu.in
ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ನೇಪಾಳ ವಿರುದ್ಧದ ದ್ವಿಪಕ್ಷೀಯ ಪಂದ್ಯದಲ್ಲಿ T20 ಅಂತರಾಷ್ಟ್ರೀಯ (T20I) ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. 2023ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ಬೆಂಚ್‌ಮಾರ್ಕ್ ಸ್ಥಾಪಿಸಿದ್ದ ನೇಪಾಳದ ಕುಶಾಲ್ ಮಲ್ಲಾ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಕೇವಲ 33 ಎಸೆತಗಳಲ್ಲಿ ಲಾಫ್ಟಿ-ಈಟನ್ ಅಳಿಸಿ ಹಾಕಿದರು.
ಈ ವೇಳೆ ಅವರು 11 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಬಾರಿಸಿದರು. ನೇಪಾಳ ವಿರುದ್ಧ ಕೇವಲ 33 ಎಸೆತಗಳಲ್ಲಿ ಟಿ20 ಶತಕ ಬಾರಿಸುವ ಮೂಲಕ ನಿಕೋಲ್ ಈ ಮಾದರಿಯಲ್ಲಿ ಅತಿ ವೇಗದ ಶತಕದ ದಾಖಲೆಯನ್ನು ಮುರಿದರು. ನೇಪಾಳದ ಕುಸಾಲ್ ಮಲ್ಲಾ ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಮೂರನೇ ಸ್ಥಾನದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಜೊತೆಗೆ ದಕ್ಷಿಣ ಆಫ್ರಿಕಾದ ಸ್ಫೋಟಕ ಡೇವಿಡ್ ಮಿಲ್ಲರ್ ಹೆಸರು ಇದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.