33.6 C
Bellary
Tuesday, May 14, 2024

Localpin

spot_img

ರಾಜಕೀಯ ಕುತಂತ್ರ ಮಾಡಿದವರು ಮನೆಯಲ್ಲಿದ್ದಾರೆ: ಜನಾರ್ದನ ರೆಡ್ಡಿ

ಬಳ್ಳಾರಿ: ನನ್ನ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಸೋಲಿಸಬೇಕು ಎಂದು ನಮ್ಮವರೆ ಕುತಂತ್ರದಿಂದ ಲಕ್ಷ್ಮೀ ಅರುಣಾ ಅವರನ್ನು ಸೋಲಿಸುವುದರ ಜೊತೆಗೆ ತಾವು ಸೋತು ಮನೆಯಲ್ಲಿ ಕುತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಅವರು ಹೇಳಿದರು.

ನಗರದ ಅವಂಭಾವಿಯಲ್ಲಿರುವ ತಮ್ಮ ಸ್ವ ಗೃಹದ ಪಕ್ಕದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ 36 ನವ ಜೋಡಿಗಳಿಗೆ ಶುಭಹಾರೈಸಿ ಅವರು ಮಾತನಾಡಿದರು.
ನಾನು ಬಳ್ಳಾರಿಯಲ್ಲಿ ಹಲವಾರು ರೀತಿಯ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ರಾಜಕೀಯ ಕುತಂತ್ರದಿಂದ ನಮ್ಮವರೆ ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದರು.
ನಾನು ಯಾವುದೇ ದ್ವೇಷದ ರಾಜಕೀಯ ಮಾಡದೇ ಎಲ್ಲರಿಗೂ ಒಳಿತಾಗಲಿ ಎಂದು ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಆದರೆ ನನ್ನನ್ನ ರಾಜಕೀಯ ದ್ವೇಷದಿಂದ ಬಳ್ಳಾರಿಯಿಂದ ದೂರ ಮಾಡಿ ಬಳ್ಳಾರಿ ಜನರಿಂದ ದೂರವಾಗುವಂತೆ ಕೆಲವರು ಮಾಡಿದರು. ಇಲ್ಲಿಗೆ ನಾನು ಬಳ್ಳಾರಿಯಿಂದ ದೂರ ಇದ್ದು, ಸುಮಾರು 12 ವರ್ಷ ಕೆಳೆದಿದೆ. ಆದರು ನಾನು ಬಳ್ಳಾರಿ ಜನರನ್ನು ಮರೆಯದೇ ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ಬಡವರಿಗೆ ನನ್ನಿಂದ ಸಹಾಯವಾಗಲಿ ಎಂಬ ದೃಷ್ಟಿಯಿಂದ ಉಚಿತವಾಗಿ ಸಾಮೂಹಿಕ ವಿವಾಹ ಮಾಡುತ್ತಾ ಬಂದಿದ್ದೇನೆ ಎಂದರು.

ಈ 12 ವರ್ಷದಲ್ಲಿ ನಾನು ಯಾರನ್ನು ಬೆಳಸಿದ್ದೇನೂ ಅವರೆಲ್ಲ ನನ್ನ ಮರೆತಿದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಆ ಭಗವಂತ ಅವರಿಗೆ ತಕ್ಕಪಾಠ ಕಲಿಸಿದ್ದಾನೆ. ನಾನು ಬಳ್ಳಾರಿ ಬಿಟ್ಟಿದ್ದರಿಂದ ಬಳ್ಳಾರಿ ಅಭಿವೃದ್ಧಿಯಾಗಲು ನನ್ನ ಪತ್ನಿ ಲಕ್ಷ್ಮೀ ಅರುಣಾ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದರು. ಆದರೆ ನಮ್ಮಲ್ಲಿ ಇರುವ ಕೆಲವರು ಶತ್ರುಗಳ ಜೊತೆ ಕೈ ಜೋಡಿಸಿ ಕುತಂತ್ರದಿಂದ ಅವರನ್ನು ಸೋಲಿಸಿದರು.ಆದರೆ, ಅವರೂ ಆ ಪ್ರಯತ್ನ ಮಾಡಿದಕ್ಕೆ ಅವರೂ ಕೂಡ ಸೋತು ಮನೆಯಲ್ಲಿ ಇದ್ದಾರೆ ಎಂದು ಅವರು ಹೇಳಿದರು.

ಕೆಆರ್ ಪಿಪಿಗೆ ಕೆಲಸ ಮಾಡಿದವರಿಗೆ ಯಾವುದೇ ಕಚೇರಿಯಲ್ಲಿ ಕೆಲಸ ಆಗಬಾರದು ಎಂದು ಕೇಳಿ ಬಂದಿದೆ. ಆ ರೀತಿಯ ಹೇಳಿದವರು ಹುಚ್ಚರು ಎಂದು ನಾನು ಭಾವಿಸುತ್ತೇನೆ. ರಾಜಕೀಯ ಮುಗಿದ ನಂತರ ಯಾವುದೇ ಗೆದ್ದ ವ್ಯಕ್ತಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು. ನಾವು ಮಾಡುವ ಅಭಿವೃದ್ಧಿ ಕೆಲಸ ಎಲ್ಲರಿಗೂ ತಲುಪುವಂತೆ ಮಾಡಬೇಕು. ಅದನ್ನು ಬಿಟ್ಟು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ಸೂಚಿಸಿದವರಿಗೆ ಕೆಲವು ಕೆಚೇರಿಗಳಲ್ಲಿ ತಮ್ಮ ಕೆಲಸ ಮಾಡಿ ಕೊಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಮಠದ ಸ್ವಾಮೀಜಿಗಳು, ಗಾಲಿ ಲಕ್ಷ್ಮೀ ಅರುಣಾ, ಬ್ರಹ್ಮಿಣಿ ಸೇರಿದಂತೆ ಕೆಆರ್ ಪಿಪಿ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಊರುಗಳಿಂದ ಬಂದ ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles