ಬಳ್ಳಾರಿ: ಪಿತೃ ಪಕ್ಷದ ಹದಿನೈದು ದಿನಗಳ ಕಾಲ ಮನೆಯ ಹಿರಿಯರಿಗೆ ಮೃತ ವ್ಯಕ್ತಿಗಳ ಪಿಂಡ ಪ್ರಧಾನ ಮಾಡೋದು ಸಾಮಾನ್ಯ. ಅದರಲ್ಲೂ ಮಹಾಲಯ ಅಮಾವಾಸ್ಯೆ ದಿನ ದೇಶಾದ್ಯಂತ ಅದೆಷ್ಟೋ ಜನರು ಹಿರಿಯರ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ ಆದರೆ ಬಳ್ಳಾರಿಯ ಶ್ರೀ ವಿಠ್ಠಲ ಕೃಷ್ಣ ಮಂದಿರದಲ್ಲಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಮೃತ ಯೋಧರಿಗೂ ಪಿಂಡ ಪ್ರಧಾನ ಮಾಡೋ ಮೂಲಕ ಪಿತೃ ತರ್ಪಣ ಬಿಡಲಾಗಿದೆ. ಈ ಮೂಲಕ ಯೋಧರು ಕೂಡ ನಮ್ಮ ಕುಟುಂಬದವರೇ ಎನ್ನುವ ಸಂದೇಶ ಸಾರೋದ್ರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಅರ್ಚಕರಾದ ಅಕ್ಷಯ ಮತ್ತು ದೇವಸ್ಥಾನದ ಮುಖಂಡರಾದ ಪ್ರಕಾಶರಾವ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಹಿರಿಯ ತಮ್ಮ ಹಿರಿಯರಿಗೆ ಪಿತೃತರ್ಪಣ ಅರ್ಪಿಸಿದರು.
ಈ ವೇಳೆ ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಕೃಷ್ಣಮೂರ್ತಿ, ಚಿದಂಬರ್, ಹೆಚ್.ಕೆ. ವೆಂಕಟೇಶ ಉದಯಕುಮಾರ, ಮದ್ವೇಶ್, ನರಸಿಂಹ, ಸಂಜು ಸೇರಿದಂತೆ ಇತರರು ಇದ್ದರು.