ಮರಿಯಮ್ಮನಹಳ್ಳಿ:ಸರ್ವ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಆರ್ಯವೈಶ್ಯ ಸಮುದಾಯದ ನಿವೇಶನದಲ್ಲಿ ಸುಸಜ್ಜಿತ ಸಮುದಾಯಭವನ (ಕಲ್ಯಾಣಮಂಟಪ) ವನ್ನು ಬಿ.ಎಂ.ಎಂ.ಇಸ್ಪಾತ್ ಕಂಪನಿ ನಿರ್ಮಿಸಲಿದೆ ಎಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮಾನವಸಂಪನ್ಮೂಲ, ಆಡಳಿತ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ತಿಳಿಸಿದರು.ಅವರು ಪಟ್ಟಣದಲ್ಲಿ ಆರ್ಯವೈಶ್ಯ ಸಮಾಜದ ನಿವೇಶನದಲ್ಲಿ,ಬಿ.ಎಂ.ಎಂ.ಕಂಪನಿ ನಿರ್ಮಿಸಲಿರುವ ಸಮುದಾಯಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.
ಸುಮಾರು 2ವರೆಕೋಟಿರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯಭವನವು,ಬಡವರಿಗೆ ವರದಾನವಾಗಲಿದೆ, ಪಟ್ಟಣದಲ್ಲಿ ಬಡವರು ಮದ್ಯಮವರ್ಗದವರು ಕಾರ್ಯಕ್ರಮ ಹಮ್ಮಿಕೊಳ್ಳಲು ಪಕ್ಕದ ನಗರಕ್ಕೆ ತೆರಳ ಬೇಕಿದೆ,ಅದನ್ನು ತಪ್ಪಿಸಲು ಪಟ್ಡಣದಲ್ಲಿ ಸುಸಜ್ಜಿತ ಸಮುದಾಯಭವನ ನಿರ್ಮಿಸಿದರೆ ಸಹಾಯವಾಗುವ ಹಿನ್ನೆಲೆಯಲ್ಲಿ ಆದ್ಯತೆ ನೀಡಲಾಗಿದೆ ಎಂದರು.ಈ ಸಂಧರ್ಭದಲ್ಲಿ ಆರ್ಯವೈಶ್ಯಸಮಾಜದ ಅಧ್ಯಕ್ಷ ಚಿದ್ರಿಸತೀಶ,ಸಮಾಜದ ಮುಖಂಡರಾದ ಎಂ.ವಿಶ್ವನಾಥಶೆಟ್ಟಿ,ಡಾ.ಪಿ.ವಿಜಯವೆಂಕಟೇಶ,ಡಿ.ರಾಘವೇಂದ್ರಶೆಟ್ಟಿ,ಎನ್.ಶ್ರೀನಿವಾಸಶೆಟ್ಟಿ,ಡಿ.ಶ್ರೀನಿವಾಸಶೆಟ್ಟಿ,ನರಸಿಂಹರಾವ್,ಜಿ.ಕೆ.ವೆಂಕಟೇಶ,ಕುಪ್ಪಾಗೋವಿಂದರಾಜಶೆಟ್ಟಿ,ರಘುನಂದನ್,ಪಿ.ವಿ.ರಾಘವೇಂದ್ರ,ಕಾಕುಬಾಳ ಮಾರುತಿ,ಐ.ವೆಂಕಟರಮಣ, ಎಸ್.ಕೃಷ್ಣನಾಯ್ಕ,ಗೋವಿಂದರಪರಶುರಾಮ,ತಳವಾರ ದೊಡ್ಡ ರಾಮಣ್ಣ, ಗುಂಡಾಕೃಷ್ಣ,ಎಸ್.ಮಹಮದ್, ಬಿ.ಎಂ.ಎಂ. ಅಧಿಕಾರಿಗಳಾದಲಿಂಗರಾಜ್,ಅರುಣಕುಮಾರ್,ಬಾಬುಸಾಬ್,ಮಲ್ಲಿಕಾರ್ಜುನ,ಸತೀಶಗೌಡ ಸೇರಿದಂತೆ ಇತರರಿದ್ದರು.