ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ಸಮೀಪದ ಡಣಾಪುರ ಗ್ರಾಮದಬಳಿ ನಡೆದ ಅಪಘಾತದಲ್ಲಿ 10ಜನರು ಗಾಯಗೊಂಡು ಓರ್ವ ಮೃತನಾದ ಘಟನೆ ಸಂಜೆ ನಡೆದಿದೆ.ಪಟ್ಡಣದಿಂದ ಹೊಸಪೇಟೆ ಕಡೆ ಚಲಿಸುತ್ತಿದ್ದ,ಪ್ರಯಾಣಿಕರನ್ನು ತುಂಬಿದ ಆಟೋದ ಹಿಂಬದಿಯಲ್ಲಿ ಇದೇ ಮಾರ್ಗವಾಗಿ ಚಲಿಸುತ್ತಿದ್ದ ವಿ.ಆರ್.ಎಲ್. ಲಾರಿ ಢಿಕ್ಕಿಹೊಡೆದಿದೆ.
ಆಟೋದಲ್ಲಿದ್ದ 11ಜನರು ಗಾಯ ಗೊಂಡಿದ್ದಾರೆ. ಹನುಮನಹಳ್ಳಿಯ ಬಿಸನಳ್ಳಿಮಲ್ಲೇಶ(17) ತೀವ್ರಗಾಯಗೊಂಡಿದ್ದನು, ಉಳಿದಗಾಯಾಳುಗಳನ್ನು ಪಟ್ಟಣ ಮತ್ತು ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿತ್ತು. ತೀವ್ರಗಾಯಗೊಂಡ ಮಲ್ಲೇಶನಿಗೆ ಬಳ್ಳಾರಿಯ ವಿಮ್ಸ್ ಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
“ಪರೀಕ್ಷೆಗೆ ಹೋದವ ಮಸಣಸೇರಿದ”
ದ್ವಿತಿಯ ಪಿಯುಸಿ ಪರೀಕ್ಷೆಗೆಂದು ಪಟ್ಟಣದ ಪರೀಕ್ಷಾಕೇಂದ್ರಕ್ಕೆ ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ಈ ಆಟೋದಲ್ಲಿದ್ದರು.ಪರೀಕ್ಷೆ ಬರೆಯಲು ಬಂದ ವಿಧ್ಯಾರ್ಥಿಗಳು ಕೆಲವರು ಗಾಯಗೊಂಡರು.ಓರ್ವ ವಿಧ್ಯಾರ್ಥಿ ಮೃತನಾಗಿದ್ದಾನೆ.
“ಗಾಯಗೊಂಡವರು”
ಆಕಾಶ(19),ನಾಗರಾಜ(48),ಗಾಳೆಮ್ಮ(32),ದುರುಗಮ್ಮ(30),ಸಂಜನಾ(17),ಹುಚ್ವಮ್ಮ(43),ಮಲ್ಲಮ್ಮ(40),ದೀಪಾ,(17)ನಸೀಮಾ(24),ಲಕ್ಷ್ಮಿ(20),ಮೃತ ಮಲ್ಲೇಶ(17)ಎನ್ನಲಾಗಿದೆ.