ಬೆಳಗಾಯಿತು ವಾರ್ತೆ |www.belagayitu.in
ಬಳ್ಳಾರಿ :ಭಾರತ ಸರ್ಕಾರವು ಬಡಜನರ ಹಿತಕ್ಕಾಗಿ ಕಡಿಮೆ ಬೆಲೆಯಲ್ಲಿ ಶೇಕಡಾ 50 ರಿಂದ 90 ರ ವರೆಗೆ ರಿಯಾಯತಿ ಉಳ್ಳ ಔಷಧಿಗಳನ್ನು ಜನ ಔಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡುತ್ತಿದ್ದು ಇದರ ಸದುಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಮ್ಸ್ ನಿರ್ದೇಶಕರಾದ ಡಾ. ಟಿ ಗಂಗಾಧರ ಗೌಡ ಅವರು ತಿಳಿಸಿದರು. ನಗರದ ಟಿಬಿ ಸ್ಯಾನಿಟೋರಿಯಂ ಹತ್ತಿರದ ವಿಮ್ಸ್ ಸುಪರ್‌ಸ್ಪೇಷಾಲಿಟಿ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲರುವ ಜನ ಔಷಧಿ ಕೇಂದ್ರದ ಮಾಹಿತಿ ವಿಡಿಯೋವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ಜನ ಔಷಧಿ ಮುಖ್ಯಸ್ಧರಾದ ವಿ. ಸ್ವರೂಪ್ ಕುಮಾರ್ ರವರು ಉಪಸ್ಥತರಿದ್ದರು.