25.2 C
Bellary
Friday, June 21, 2024

Localpin

spot_img

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ, ಮಾರ್ಚ್ 05: ಜಿಲ್ಲೆಯ ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕಿನಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್. ಗೋವಿಂದಪ್ಪ ಮಾಹಿತಿ ನೀಡಿದ್ದಾರೆ.

ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ 1, ಸಿರುಗುಪ್ಪ ತಾಲ್ಲೂಕಿನ ಕೊಂಚಗೇರಿ ಗ್ರಾಮ ಪಂಚಾಯಿತಿ 1, ಕೆಂಚನಗುಡ್ಡ ಗ್ರಾಮ ಪಂಚಾಯಿತಿ 1 ಸೇರಿ ಒಟ್ಟು 03 ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿಯಿದ್ದು, ಆಯಾ ತಾಲೂಕು ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇಮಕ ಮಾಡಲಾಗುತ್ತದೆ.

ವೇತನ ವಿವರ: ಈ ಹುದ್ದೆಗಳು ಗೌರವ ಧನ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿರುತ್ತವೆ. ಮಾಸಿಕ ಗೌರವಧನ ರೂ. 9000 ಇರುತ್ತದೆ. ಈ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಸ್ಥಳೀಯ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ 18 ರಿಂದ 45ವರ್ಷ ವಯೋಮಿತಿ ಹೊಂದಿರುವ ವಿಕಲಚೇತನರು ಅರ್ಹರಿರುತ್ತಾರೆ (ಕರ್ತವ್ಯ ನಿರ್ವಹಿಸಲು ಸಮರ್ಥರಿರುವ ವಿಕಲಚೇತನರು)

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles