ಬೆಳಗಾಯಿತು ವಾರ್ತೆ | www.belagayithu.in
ನಟಿಯಾಗುವ ಕನಸಿಗೆ ನೀರೆರೆಯಲಿದೆ ಮಹಾನಟಿ ಕಾರ್ಯಕ್ರಮ, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಾಯಕನಟಿಯರನ್ನ ಹುಡುಕುವ ಕೆಲಸ ಶುರುಮಾಡಿದೆ.
ಮಹಾನಟಿ ಎಂಬ ಈ ರಿಯಾಲಿಟಿ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು, ಇದರ ಆರಂಭಿಕ ಹಂತವೆಂಬಂತೆ ಇದೇ ಗುರುವಾರ, 15-02-2024 ರಂದು ಬೆಳಿಗ್ಗೆ 9 ಗಂಟೆಗೆ ಇಂಟರ್ ನ್ಯಾಷನಲ್ ಡೆಲ್ಲಿ ಪಬ್ಲಿಕ್ ಸ್ಕೂಲ್, ಪಾರ್ವತಿನಗರ ಬಳ್ಳಾರಿ. ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರಸ್ ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದ್ದು, ಜೀ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.
