ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ : ಕಂಪ್ಲಿಯ ಮುದ್ದಾಪುರ ಗ್ರಾಮದ ಹೊನ್ನಪ್ಪ ರವರಿಗೆ ಮಂಗಳವಾರ ಬೆಳಗ್ಗೆ ನಗರದ ೩೩ನೇ ವಾರ್ಡಿನ ವಿನಾಯಕ ನಗರದಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಹೊನ್ನಪ್ಪ ಅವರು ಕುಡಿತಿನಿಯ ಯುನಿಯನ್ ಬ್ಯಾಂಕ್ ನಲ್ಲಿ ರಿಕವರಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆ ನಡೆದು ಕೆಲವು ಗಂಟೆಗಳು ಅದರು ಸಿಬ್ಬಂದಿ ಯಾರು ಘಟನ ಸ್ಥಳಕ್ಕೆ ಬಾರದ ಕಾರಣ 2 ರಿಂದ 3 ಕಿಲೋಮೀಟರ್ ವರೆಗೆ ಸಾವಿರಾರು ವಾಹನಗಳು ಹೊಸಪೇಟೆಯ ಪ್ರಧಾನ ರಸ್ತೆಯಲ್ಲಿ ಸ್ಥಗಿತವಾಗಿದ್ದಾವು. ಜಿಂದಾಲ್ ಕಾರ್ಖಾನೆ ಹಾಗೂ ಕುಡುತ್ತಿನಿ ಪವರ್ ಪ್ಲಾಂಟ್ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ವಾಹನಗಳಿಂದ ಕೆಳಗಡೆ ಇಳಿದು ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ನಿಂತ ಘಟನೆ ಕಂಡು ಬಂತು.
ಆನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದ ನಂತರ ಸ್ಥಳೀಯರು ಮತ್ತು ಪ್ರಯಾಣಿಕರು ಹಾಗೂ ವಿವಿಧ ಕಾರ್ಖಾನೆಗಳಿಗೆ ಹೋಗುವ ಸಿಬ್ಬಂದಿ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ರಸ್ತೆ ಮಾರ್ಗದಲ್ಲಿ ದಿನನಿತ್ಯ ಇಂಥ ಘೋರ ಘಟನೆಗಳು ನಡೆಯುತ್ತಿವೆ.ರಸ್ತೆ ಅಗಲೀಕರಣ ಆಗಬೇಕು ಮತ್ತು ಟ್ರಾಫಿಕ್ ನಿಯಂತ್ರಣ ತಪ್ಪಿಸಬೇಕು ಎಂದು ಪ್ರಯಾಣಿಕರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.