ಬಿ.ಶ್ರೀರಾಮುಲು ಪರ ಯದುವೀರ್ ಮತಯಾಚನೆ

ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ, ಮೇ.04: ನಾನು ಐತಿಹಾಸಿಕ ಹಂಪಿ, ಅಂಜನಾದ್ರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಪ್ರಚಾರಕ್ಕೆ ಇದೇ ಮೊದಲ ಬಾರಿಬಂದಿರುವೆ.ದಲಿತರ ಜೊತೆಗೆ ನಾವಿದ್ದೇವೆಂದರು. ಮೈಸೂರಿನ ಸಂಸ್ಥಾನಕ್ಕೂ ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ಅಂಬೇಡ್ಕ‌ರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾ ಪ್ರತಿನಿಧಿ ಸಮಯ ಉಲ್ಲೇಖಿಸಿದ್ದರು. ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತಾ ಬಂದಿದ್ದೇವೆ. ಸಾಮಾನ್ಯ ಜನರ ಜೊತೆಗೆ ಮೈಸೂರಿನ ಮಹಾರಾಜ ಸದಾಕಾಲವೂ ಇದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಮತಯಾಚನೆಗೆ ಆಗಮಿಸಿದ ಮೈಸೂರಿನ ರಾಜ ಮನೆತನದ ಯದುವೀರ್ ಅವರು ಇಂದು ನಗರದ ಜೈನ್ ಮಾರುಕಟ್ಟೆ ಮತ್ತು ಬಿ.ಗೋನಾಳ್ ನ ದಲಿತರ ಕೇರಿಯಲ್ಲಿ ಓಡಾಡಿ ಮತಯಾಚನೆ ಮಾಡಿ ಮಾತನಾಡಿದರು.
ಒಗ್ಗಾಟ್ಟಾಗಿ ಎಲ್ಲರೂ ಭಾರತೀಯರಾಗಿ ಇರೋಣ. ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆಂಬ ವಿಶ್ವಾಸವಿದೆಂದರು.
ಈ ಸಂದರ್ಭದಲ್ಲಿ ನಗರ ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಮುಖಂಡರುಗಳಾದ ಡಾ. ಎಸ್.ಜೆ.ವಿ.ಮಹಿಪಾಲ್, ಅನಿಲ್ ನಾಯ್ಡು, ಹೆಚ್.ಹನುಮಂತಪ್ಪ, ಮಹೇಶ್ವರಸ್ವಾಮಿ ಇನ್ನೀತರರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles