40.9 C
Bellary
Monday, April 22, 2024

Localpin

spot_img

ಲೋಕಸಭೆ ಚುನಾವಣೆಯಿಂದ ಅಜ್ಞಾತವಾಸ ಮುಕ್ತಾಯ

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಕೇಂದ್ರ ಲೋಕ ಸಭೆ ಚುನಾವಣೆಯ ಪಟ್ಟಿ ಬುಧವಾರ ಬಿಡುಗಡೆಗೊಳಿಸಿದ್ದು, ಬಳ್ಳಾರಿ ಜಿಲ್ಲೆಗೆ ಸ್ಪರ್ಧೆ ಮಾಡಲು ನನಗೆ ಅವಕಾಶ ನೀಡಿರೋ ಮೋದಿ, ನಡ್ಡಾ, ಅಮಿತ್ ಷಾ , ಸಂತೋಷ ಜಿ ..ಯಡಿಯೂರಪ್ಪ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಅಹಂಬಾವಿಯ ಗೃಹ ಕಚೇರಿಯಲ್ಲಿ ಗುರುವಾರ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನನ್ನನ್ನಯ ವಿಧಾನ ಸಭೆ ಚುನಾವಣೆಯ ಸೋಲಿನಿಂದ ಅಜ್ಞಾತ ವಾಸಕ್ಕೆ ಕಳುಹಿಸಲಾಗಿತ್ತು. ಆದರೆ ಈಗ ಲೋಕಸಭೆ ಚುನಾವಣೆಯಿಂದ ಅಜ್ಞಾತವಾಸ ಮುಕ್ತಾಯವಾಗಿದೆ ಎಂದರು.
ವಿಧಾನ ಸಭೆ ಚುನಾವಣೆಯಲ್ಲಿ ದ್ವೇಷ ಮತ್ತು ಮೋಸದ ರಾಜಕೀಯ ಮಾಡಿಲಾಗಿತ್ತು. ಆದರೆ ಈಗ ಅದು ನಡೆಯೋಲ್ಲ ಎಂದ ಅವರು, ನಗರಸಭೆ ಸದಸ್ಯನಿಂದ ಜೀವನ ಪ್ರಾರಂಭಿಸಿ ಶಾಸಕ, ಸಂಸದ, ಸಚಿವರಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ಬಳ್ಳಾರಿ ಜನತೆಗೆ ಗೋತ್ತಿದೆ. ಹಾಗಾಗಿ ಈ ಬಾರಿ ನನ್ನ ಜನ ನನ್ನ ಕೈ ಬಿಡಲ್ಲ ಎಂಬ ಆತ್ಮ ವಿಶ್ವಾಸ ಇದೆ ಎಂದರು.
ಆಡು‌ ಮುಟ್ಟದ ಸೊಪ್ಪಿಲ್ಲ ರಾಮುಲು ಪ್ರೀತಿ ಮಾಡೋ ವ್ಯಕ್ತಿ ಇಲ್ಲ ಎಂಬ ಗಾದೆ ಮಾತು ಹೇಳಿದ ರಾಮುಲು ಅವರು, ಮೂವತ್ತು ವರ್ಷದ ಸುದೀರ್ಘ ರಾಜಕೀಯ ಈ ಬಾರಿ ನನ್ನ ಕೈ ಹಿಡಿಯುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಜೊತೆಗೆ ನಾಲ್ಕು ನೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ಇದರಿಂದ ಕೇಂದ್ರ ಮತ್ತು ರಾಜ್ಯ ಸುಭಿಕ್ಷೆಯಾಗಲಿದೆ ಎಂದರು.
ಇದು ಕೇವಲ ರಾಮುಲು ಚುನಾವಣೆ ಅಲ್ಲ ಇಡೀ ದೇಶದ ಚುನಾವಣೆ ಇದಾಗಿದೆ. ಜನರು ಮೋದಿ ಅವರನ್ನು ಸಾಕಷ್ಟು ಹತ್ತಿರದಿಂದ ನೋಡಿದ್ದಾರೆ. ಮತ್ತು ಮೋದಿಯವರು ಜನರ ವಿಶ್ವಾಸಗಳಿಸಿದ್ದಾರೆ ಎಂದರು.
ಕಾಂಗ್ರೆಸ್ ಧುರಾಡಳಿತ, ದುರಂಹಕಾರ ಮತ್ತು ಕುಟುಂಬ ರಾಜಕೀಯದಿಂದ ಒಂದೇ ಕುಟುಂಬ ರಾಜಕೀಯಕ್ಕೆ ಸೀಮಿತವಾಗಿತ್ತು. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು.. 1999ರ ಸುಷ್ಮಸ್ವರಾಜ್ ಚುನಾವಣೆ ಬಳಿಕ ಬಿಜೆಪಿ ಗಟ್ಟಿಯಾಗಿದೆ. ಸುಷ್ಮಸ್ವರಾಜ್ ಸೋತ್ರು ನಂತರ ನಿರಂತರವಾಗಿ ಬಿಜೆಪಿ ಬಳ್ಳಾರಿಯಲ್ಲಿ ಗೆದ್ದಿದೆ ಎಂದ ಅವರು, ಕಾಂಗ್ರೆಸ್ ನವರು ಶ್ರೀರಾಮುಲು ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸೋ ಪ್ಲಾನ್ ಮಾಡ್ತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡೋದಿಲ್ಲ ಎಂದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles