ಸುಧಾಕ್ರಾಸ್ ರಸ್ತೆ ಕಾಮಗಾರಿ ಪ್ರಾರಂಭ ಪರ್ಯಾಯ ಮಾರ್ಗದಲ್ಲಿ ಸಂಚರಿಸಿ

ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ:ನಗರದ ಸುಧಾಕ್ರಾಸ್ ವೃತ್ತದಿಂದ ಓಪಿಡಿ ರಸ್ತೆಯವರೆಗೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಓಪಿಡಿ ವೃತ್ತದಿಂದ ಸುಧಾಕ್ರಾಸ್ ರೈಲ್ವೇ ಗೇಟ್‌ವರೆಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ:ಬಳ್ಳಾರಿ ನಗರದ ಎಸ್.ಪಿ ಸರ್ಕಲ್‌ನಿಂದ ಹೊಸಪೇಟೆ ರಸ್ತೆ ಕಡೆಗೆ ಹೋಗುವ ಎಲ್ಲಾ ವಿಧದ ವಾಹನಗಳು (ಶಾಲಾ, ಕಾಲೇಜು ಮತ್ತು ವೈದ್ಯಕೀಯ, ತುರ್ತು ಸೇವೆ ವಾಹನಗಳು ಹೊರಡತುಪಡಿಸಿ) ಇನ್‌ಫ್ಯಾಂಟ್ರಿ ರಸ್ತೆ, ಪೋಲೋ ಪ್ಯಾರಾಡೈಸ್ ಹೋಟೆಲ್ ಮುಂದಿನ ರಸ್ತೆ ಮೂಲಕ 2ನೇ ರೈಲ್ವೇಗೇಟ್, ಐ.ಟಿ.ಐ ಕಾಲೇಜು ಮುಖಾಂತರ ಹೊಸಪೇಟೆ ರಸ್ತೆ ಕಡೆ ಸಂಚರಿಸಬಹುದು.ಶಾಲಾ/ಕಾಲೇಜು, ವೈದ್ಯಕೀಯ ಮತ್ತು ತುರ್ತು ಸೇವೆಗಳ ವಾಹನಗಳು ಮಾತ್ರ ವಿಮ್ಸ್ ನಿರ್ದೇಶಕರ ಕಚೇರಿಯ ಮುಂದಿನ ರಸ್ತೆಯ ಮೂಲಕ ಕಂಟೋನ್‌ಮೆ0ಟ್ ರೈಲ್ವೇಗೇಟ್ ಮುಖಾಂತರ ಸಂಚರಿಸಬೇಕು.
ಹೊಸಪೇಟೆ ಕಡೆಯಿಂದ ಬಳ್ಳಾರಿ ನಗರಕ್ಕೆ ಆಗಮಿಸುವ ಎಲ್ಲಾ ವಿಧದ ಲಘು ಗಾತ್ರದ ವಾಹನಗಳು ಆರ್.ಟಿ.ಓ ಕಚೇರಿ, ಕೌಲಬಜಾರ್ 2ನೇ ರೈಲ್ವೇ ಗೇಟ್ ಮೂಲಕ ಅಥವಾ ಕೌಲಬಜಾರ್ 1ನೇ ರೈಲೈಗೇಟ್ ಮೇಲ್ಸೇತುವೆ ಮೂಲಕ ಸಂಚರಿಸಬಹುದು.ಹೊಸಪೇಟೆ ಕಡೆಯಿಂದ ಬಳ್ಳಾರಿ ನಗರ ಮೂಲಕ ಸಂಚರಿಸುವ ಭಾರಿ ಗಾತ್ರದ ಸರಕು ಸಾಗಾಣಿಕೆ ವಾಹನಗಳು ಕೇವಲ ರಾತ್ರಿ 11 ಗಂಟೆಯಿ0ದ ಬೆಳಿಗ್ಗೆ 06 ಗಂಟೆಯವರೆಗೆ ಕೌಲಬಜಾರ್ ಮೇಲ್ಸೇತುವೆ ಮೂಲಕ ಸಂಚರಿಸಬಹುದು.
ಬಳ್ಳಾರಿ ನಗರದಿಂದ ಹೊಸಪೇಟೆ ರಸ್ತೆಗೆ ಹೋಗುವ ಎಲ್ಲಾ ವಿಧದ ವಾಹನಗಳು ಕೌಲಬಜಾರ್ 1ನೇ ರೈಲ್ವೇಗೇಟ್ ಮೇಲ್ಸೇತುವೆ ಮೂಲಕ ಅಥವಾ ಲಘು ಮೋಟಾರು ವಾಹನಗಳು ರಂಗಮ0ದಿರ ರಸ್ತೆಯ ಕೆಳಸೇತುವೆ ಮೂಲಕ ಸಂಚರಿಸಬಹುದು.ಈ ಅಧಿಸೂಚನೆಯು ಕಾಮಗಾರಿ ಮುಕ್ತಾಯಗೊಂಡು ಸಂಚಾರ ಪ್ರಾರಂಭವಾಗುವವರೆಗೂ ಚಾಲ್ತಿಯಲ್ಲಿರುತ್ತದೆ. ಸಂಬ0ಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಸೂಕ್ತ ಸಂಕೇತಗಳನ್ನು ಹಾಗೂ ಇತರೆ ಎಲ್ಲಾ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles