ಬೆಳಗಾಯಿತು ವಾರ್ತೆ
ಸಂಡೂರು: ನಮ್ಮ ಅಣ್ಣ ದಿವಂಗತ ಅಶೋಕ್ ಲಾಡ್ ಅವರು ಬದುಕಿದ್ದರೆ ಇಂದು ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿರುತ್ತಿದ್ದರು ಆದರೆ ದುರದೃಷ್ಟ ವಶಾತ್ ಅವರು ಅಪಘಾತದಲ್ಲಿ ತೀರಿಕೊಂಡದ್ದು ನಮ್ಮ ದುರ್ದೈವ ಎಂದು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಮಾಜಿ ಶಾಸಕ, ಹಾಲಿ ಜೆಡಿಎಸ್ ಪಕ್ಷದ ಮುಖಂಡ ಅನಿಲ್ ಹೆಚ್.ಲಾಡ್ ಅವರು ಅಭಿಪ್ರಾಯ ಪಟ್ಟರು.
ಸಂಡೂರು ತಾಲೂಕಿನ ಕಾಟಿನಕಂಬ ಗ್ರಾಮದಲ್ಲಿ ಉಪಚುನಾವಣೆಯ ನಿಮಿತ್ತ ಬಿಜೆಪಿ ಪಕ್ಷದ ಹುರಿಯಾಳು ಬಂಗಾರ ಹನುಮಂತು ಅವರ ಪ್ರಚಾರ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕರಾಗಿದ್ದ ದಿವಂಗತ ಹಿರೋಜಿ ಲಾಡ್ ಪ್ರೇರಣೆ ಮತ್ತು ಜನಸೇವೆಯ ಗುಣಗಳು ಲಾಡ್ ಕುಟುಂಬದ ಮೇಲೆ ಹೆಚ್ಚು ಪರಿಣಾಮ ಬೀರಿವೆ ಅದರಲ್ಲೂ ಅಶೋಕ್ ಲಾಡ್ ಅವರು ತಾಲೂಕಿನ ಮುಗ್ಧ ಜನರೊಂದಿಗೆ ಬೆರೆತು ಅವರೊಂದಿಗೆ ಮುದ್ದೆ ಚಟ್ನಿ ತಿನ್ನುತ್ತಾ ಅವರ ಕಷ್ಟಗಳಿಗೆ ಭಾಗಿಯಾಗುತ್ತಿದ್ದರು ಎಂದು ಭಾವುಕರಾದರು.
ಮೀಸಲಾತಿ ಎನ್ನುವುದು ಒಬ್ಬರ ಸ್ವತ್ತಲ್ಲ ಅದು ಎಲ್ಲರಿಗೂ ಹಂಚಿಕೆಯಾಗ ಬೇಕು ಕಾಂಗ್ರೆಸ್ ಪಕ್ಷ ತುಕಾರಾಂ ಮತ್ತು ತುಕಾರಾಂ ಕುಟುಂಬಕ್ಕೆ ಸೀಮಿತ ವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಈ ಉಪಚುನಾವಣೆ ಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಮಾಜಿ ಮಂತ್ರಿ ಹಾಗು ಹಾಲಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ ಗ್ಯಾರಂಟಿಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿವೆ ಚುನಾವಣೆಗಳು ಬಂದಾಗ ಮಾತ್ರ ಇವರಿಗೆ ಮತದಾರರು ನೆನಪಾಗುತ್ತಾರೆ ಅಭಿವೃದ್ಧಿಯ ನೆನಪದಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ, ರಾಜ ನೆಂದು ಸ್ವಯಂಘೋಷಿತ ಲೋಕಸಭೆ ಸದಸ್ಯ ತುಕಾರಾಂ ಅವರಿಗೆ ಅಧಿಕಾರ ಮತ್ತು ಹಣದ ಅಮಲು ಏರಿದೆ ಮೇಲೇರಿದವನು ಕೆಳಗಡೆಯಲೇ ಬೇಕು ಇದು ಪ್ರಕೃತಿ ನಿಯಮ, ತುಕಾರಾಂ ಈ ಚುನಾವಣೆಯಲ್ಲಿ ಕೆಳಗಿಳಿ ಯಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿ ಶ್ರೀರಾಮುಲು ಅವರು ಮಾತನಾಡಿ, ಕೆಳಸಮುದಾಯ ಬಡವರು, ಹಟ್ಟಿಗಳಲ್ಲಿ ಬದುಕುತ್ತಿರುವ ಜನರು ಹೇಗಿದ್ದಾರೆ ಎಂಬುದನ್ನು ತುಕಾರಾಂ ವಿಚಾರಿಸಿಲ್ಲ ನಿಮ್ಮ ಗೊಲ್ಲರಹೊಟ್ಟಿಗೆ ಒಂದು ಮನೆಯನ್ನು ನೀಡಿಲ್ಲ ಇದು ನ್ಯಾಯವೇನ್ರಿ?. ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ಅದೇ ಜನಾಂಗದ ಸಚಿವರಾಗಿದ್ದ ನಾಗೇಂದ್ರ ಅವರು ಚುನಾವಣೆಗೆ ಬಳಸಿಕೊಂಡಂತೆ ಗೊಲ್ಲರ ನಿಗಮ, ಅಂಬೇಡ್ಕರ್ ನಿಗಮ, ಭೋವಿ ನಿಗಮ ಸೇರಿದಂತೆ ಇತರ ನಿಗಮಗಳ ಹಣವನ್ನು ದೋಚಲು ಇವರು ಮುಂದಾಗಿ ದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷ ಬಂಗಾರು ಹನುಮಂತ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ ಅವರ ಗೆಲುವಿಗೆ ನೀವೆಲ್ಲರೂ ಕಾರಣರಾಗಬೇಕೆಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ದಿವಾಕರ್ ಮಾತನಾಡಿ, ಬಿಜೆಪಿ ಪಕ್ಷವನ್ನು ಕಟ್ಟಲು ಸಂಡೂರು ಕ್ಷೇತ್ರದಲ್ಲಿ ತುಂಬಾ ಶ್ರಮ ಪಟ್ಟಿದ್ದೇನೆ ಕೊನೆಯ ಹಂತದಲ್ಲಿ ನನಗೆ ಟಿಕೆಟ್ ಸಿಗದ ಕಾರಣ ಬೇಸರವಾಯಿತು ಆದರೆ ಮುಖಂಡರೆಲ್ಲರೂ ಸೇರಿ ನನಗೆ ಪಕ್ಷದಲ್ಲಿ ಉನ್ನತವಾದ ಹುದ್ದೆಯನ್ನು ನೀಡಿ ಗೌರವಿಸಿದ್ದಾರೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಿಮ್ಮ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗುತ್ತದೆ. ಸದ್ಯ ಈಗ ಬಂಗಾರು ಹನುಮಂತು ಅವರನ್ನು ಗೆಲ್ಲಿಸಿಕೊಳ್ಳುವುದು ಬಹಳ ಮುಖ್ಯ ನೀವೆಲ್ಲರೂ ಬಿಜೆಪಿ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಅನೇಕ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದರು.
ಎಚ್ ಕೆ ಹಳ್ಳಿ ,ನಿಡಗುರ್ತಿ ಬಂಡ್ರಿ , ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಸಂಜೆವರೆಗೂ ಜರುಗಿತು.





