25 C
Bellary
Saturday, March 14, 2026

Localpin

spot_img

ಕೃಷ್ಣ ನಗರ , ಸುಶೀಲಾ ನಗರ ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ

ಬೆಳಗಾಯಿತು ವಾರ್ತೆ
ಸಂಡೂರು: ಸಂಡೂರು ಉಪಚುನಾವಣೆಯ ಅಂಗವಾಗಿ ಭಾನುವಾರ ಪ್ರಚಾರ ಕಾರ್ಯವನ್ನು ಕೃಷ್ಣಾನಗರ ಗ್ರಾಮದಿಂದ ಪ್ರಾರಂಭಿಸಲಾಯಿತು.
ದಿನದಿಂದ ದಿನಕ್ಕೆ ಗ್ರಾಮ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಈಗಾಗಲೇ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಗೆಲುವಿನ ವಾತಾವರಣ ಸೃಷ್ಟಿಯಾಗಿದೆ.

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತ , ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಕೆ ಎಸ್ ದಿವಾಕರ್, ಮಾಜಿ ಶಾಸಕರಾದ ರಾಮಚಂದ್ರ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಟಿ ಪಂಪಾಪತಿ, ಮಂಡಲ ಅಧ್ಯಕ್ಷರಾದ ನಾನಾಸಾಬ್ ನಿಕ್ಕಂ, ಸೇರಿದಂತೆ ಗ್ರಾಮದ ಹಿರಿಯರಾದ ಎಳಾರ್ಥಿ ತಿಪ್ಪೇಸ್ವಾಮಿ,ರುದ್ರಪ್ಪ, ಶೇಖರ್, ಕುಮಾರ,ಬಾವಿಕಟ್ಟೆ ಚಂದ್ರು, ಬಡೇಸಾಬ್ ಹಾಗೂ ಗ್ರಾಮದ ಜನತೆ, ಪಕ್ಷದ ಪದಾಧಿಕಾರಿಗಳು,‌ ಪ್ರಮುಖರು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ಮಧ್ಯಾಹ್ನ ದೌಲತ್ ಪುರ, ವೆಂಕಟಗಿರಿ ಹಾಗೂ ಜೈಸಿಂಗಪುರ ಗ್ರಾಮಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಪರವಾಗಿ ಅಬ್ಬರದ ಪ್ರಚಾರ ನಡೆಸಲಾಯಿತು.

ಸ್ವಾತಂತ್ರ್ಯದ ನಂತರದಿಂದಲೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದ ಕಾರಣ ಕ್ಷೇತ್ರವು ಯಾವುದೇ ಅಭಿವೃದ್ಧಿಯಾಗಿಲ್ಲ. ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ನೂರಾರು ಜನರು ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಐತಿಹಾಸಿಕ ಗೆಲುವಿನ ಮುನ್ಸೂಚನೆಯಾಗಿದೆ ಎಂದು ರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು, ಶ್ರೀರಾಮುಲು, ಮಾಜಿ ಶಾಸಕರಾದ ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಕೆ.ಎಸ್ ದಿವಾಕರ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಟಿ.ಪಂಪಾಪತಿ, ಮಂಡಲ ಅಧ್ಯಕ್ಷರಾದ ನಾನಾಸಾಹೇಬ್ ನಿಕ್ಕಂ, ದೌಲತ್ ಪುರ ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನ, ಪೂಜಾರಿ ವೆಂಕಪ್ಪ, ಜೋಗದ ಸುರೇಶ, ಮಲ್ಲಿಕಾರ್ಜುನ, ತಾಯಪ್ಪ, ಜಂಬಣ್ಣ, ಸತೀಶ, ರಾಮಣ್ಣ, ವೆಂಕಟಗಿರಿ ಗ್ರಾಮದ ಪ್ರಮುಖರಾದ ದಿವಾಕರ ನಾಯ್ಕ,ಟಿಪ್ಪು ನಾಯ್ಕ, ಕೃಷ್ಣ ನಾಯ್ಕ, ತೇಜ ನಾಯ್ಕ, ಶಂಕರ ನಾಯ್ಕ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ, ಅನಿಲ ನಾಯ್ಕ, ಬಾಲರಾಜ, ಮೌಲಾ, ಜೈಸಿಂಗಪುರ ಗ್ರಾಮದ ಪ್ರಮುಖರಾದ ತಾಯಪ್ಪ ನಾಯ್ಕ, ಹೊಳೆಬಸಪ್ಪ, ಶರಣಪ್ಪ, ಎಸ್.ರವಿ ನಾಯ್ಕ, ಎಚ್.ಗಣೇಶ, ಎನ್.ತಾಯಣ್ಣ, ಚೆನ್ನಬಸವ, ಬಾಲಪ್ಪ, ನಾಗರಾಜ, ಗ್ರಾಮಗಳ ಹಿರಿಯರು, ಪ್ರಮುಖರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles