ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ: ನಗರದಲ್ಲಿನ ಕನಕ ದುರ್ಗಮ್ಮ ದೇವಸ್ಥಾನ, ಶಾಸಕರ ಕಚೇರಿ, ಎಪಿಎಂಸಿ ಮಾರುಕಟ್ಟೆ, ಶ್ರೀ ರಾಂಪುರ ಕಾಲೋನಿ, ತಾಳೂರು ರೋಡ್ ,ಮಿಲ್ಲರ್ ಪೇಟೆ ಸೇರಿದಂತೆ ಮುಂತಾದ ಕಡೆ ಶುಕ್ರವಾರ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರು ವಿಶೇಷ ಪೂಜೆ ಸಲ್ಲಿಸಿದರು.ತದನಂತರ ಶಾಸಕರ ಕಚೇರಿಯಲ್ಲಿ ಮಾಜಿ ಶಾಸಕ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರ ಆಶೀರ್ವಾದ ಪಡೆದು ತದನಂತರ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಲಾಯಿತು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಭಿಮಾನಿಗಳಿಂದ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಹುಟ್ಟು ಹಬ್ಬದ ನಿಮಿತ್ತ ಬೃಹತ್ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಬಳ್ಳಾರಿಯ ಎಪಿಎಂಸಿಗೆ 22 ಕೋಟಿ ಅನುದಾನ ತಂದು ಮಾರುಕಟ್ಟೆಯಲ್ಲಿ ರಸ್ತೆ, ಶೆಡ್ ಸೇರಿದಂತೆ ಮುಂತಾದ ಕೆಲಸ ಮಾಡಲಾಗಿದೆ ಹಾಗೂ ಕೋಲ್ಡ್ ಸ್ಟೋರೇಜ್ ಗೆ 11 ಕೋಟಿ ಅನುದಾನ ಹಾಗೂ ಬಯೋ ಪ್ಲಾಂಟ್ ನಿರ್ಮಾಣಕ್ಕೆ 50 ಕೋಟಿ ಅನುದಾನ ತರಲಾಗಿದೆ ಎಂದರು. ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿದೆ ಎಂದರು.
ತುಂಗಭದ್ರಾ ನದಿ ನೀರನ್ನು ಬಳ್ಳಾರಿಗೆ ತರುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದೇನೆ ಅದರಂತೆ ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸಪೇಟೆಯಿಂದ ಬಳ್ಳಾರಿಗೆ ಪೈಪ್ ಲೈನ್ ಮೂಲಕ ನೀರು ತರುವ ಕಾಮಗಾರಿಗೆ ಶೀಘ್ರದಲ್ಲೇ ಸಿಎಂ, ಡಿಸಿಎಂ, ಜಮೀರ್ ಅಹಮದ್, ನಾಗೇಂದ್ರ, ಗಣೇಶ್ ಅವರಿಂದ ಚಾಲನೆ ದೊರೆಯಲಿದೆ ಎಂದರು.
ಜಿಲ್ಲೆಯ ಮಸೀದಿಗಳಿಗೆ 1 ಕೋಟಿ 50 ಲಕ್ಷ ನೀಡಲಾಗಿದೆ. ಬ್ರೂಸ್ ಪೇಟೆ ಜಮೀಯಾ ಮಸೀದಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಅಭಿವೃದ್ಧಿ ಆಗದ ದೇವಸ್ಥಾನಗಳಿಗೆ 5 ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದರು.
ನಗರದ ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಳಿಸಿ ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು.
ಜಿಲ್ಲಾ ಸಂಕೀರ್ಣ ನ್ಯಾಯಾಲಯಕ್ಕೆ 22 ಕೋಟಿ ಅನುದಾನ ತರಲಾಗಿದೆ. ಅತೀ ಶೀಘ್ರದಲ್ಲಿ 3800 ಸಾವಿರ ಮನೆಗಳಿಗೆ ಪಟ್ಟ ವಿತರಣೆ ಮಾಡಲಾಗುವುದು. ಅತಿ ಶೀಘ್ರದಲ್ಲಿ ಮುಂಡ್ರಗಿಯಲ್ಲಿ 820 ಮನೆಗಳ ಗೃಹ ಪ್ರವೇಶ ವಾಗಲಿದೆ.ಬಳ್ಳಾರಿಯ ಗುಡ್ಡಕ್ಕೆ ಕೋಟೆಗೆ ರೋಪ್ ವೇ ನಿರ್ಮಾಣಕ್ಕೆ ಅನುಮತಿ ದೊರೆತಿದೆ ಅತೀ ಶೀಘ್ರದಲ್ಲಿ ಕಾಮಗಾರಿ ಕೆಲಸ ಚಾಲನೆ ದೊರೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಸಿಹಿ ಜೊತೆಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
ನಗರದ ಮೋತಿ ಸರ್ಕಲ್ ನಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರು ಅಭಿಮಾನಿಗಳಿಂದ ಭರತ್ ರೆಡ್ಡಿ ಅವರ 135 ಅಡಿ ಎತ್ತರದ ಕಟೌಟ್ ಎಲ್ಲಾರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶಾಸಕ ಗಣೇಶ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಅಬ್ದುಲ್ ಬಾರಿ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಕುಬೇರಾ, ಎಂ.ಪ್ರಭಂಜನಕುಮಾರ್, ಮಿಂಚು ಸೀನಾ, ಕೆ.ನೂರ್ ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ವಿಷ್ಣು ಬೋಯಪಾಟಿ, ಸತೀಶ್ ರೆಡ್ಡಿ, ಅಲಿವೇಲು ಸುರೇಶ್, ಮಂಜುಳಾ, ಎಂ.ವಿವೇಕ್, ಸಿಲಾರ್, ವಿಶ್ವ, ರಘುನಾಥ ಪಾಟೀಲ್, ಸಿದ್ಧೇಶ್, ಧರ್ಮಶ್ರೀ, ಕಂಪ್ಲಿಯ ಕಾಂಗ್ರೆಸ್ ಮುಖಂಡರಾದ ವಾಸು, ರಘು ಮೊದಲಾದ ಮುಖಂಡರು ಹಾಜರಿದ್ದರು.