ಬಳ್ಳಾರಿಯಲ್ಲಿ ನಕಲಿ ನೋಟ್ ಜಾಲ ಪತ್ತೆ: ಓರ್ವನ ಬಂಧನ

ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ರಾಮಾಂಜನೇಯ ನಗರದಲ್ಲಿ ನಕಲಿ ನೋಟ್ ಚಲಾವಣೆ ಮಾಡಲಾಗುತ್ತಿದ್ದ ಆರೋಪದ ಮೇಲೆ ಮಹೇಂದ್ರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿಯೊಂದಿಗೆ ಎನ್‌ಐಎ ತಂಡವೊಂದು ಶನಿವಾರ ದಾಳಿ ನಡೆಸಿ ನಕಲಿ ಕರೆನ್ಸಿ ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಮಹೇಂದರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪ್ರಿಂಟಿಂಗ್ ಪ್ರೆಸ್ ಮತ್ತು 500 ನೋಟಿನ ಮಾದರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles