30.6 C
Bellary
Monday, May 6, 2024

Localpin

spot_img

ಬಳ್ಳಾರಿಯಲ್ಲಿ ಇಂದಿರಾ ಕ್ಯಾಂಟಿನ್‌ ರೀಓಪನ್‌

ಬೆಳಗಾಯಿತು ವಾರ್ತೆ | www.belagayithu.in

ಬಳ್ಳಾರಿ: ನಗರದ ಮೋತಿ ಸರ್ಕಲ್ ನಲ್ಲಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಕಳೆದ ಮೂರು ವಾರಗಳಿಂದ ಬಂದ್ ಆಗಿತ್ತು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಬಳ್ಳಾರಿ ಬೆಳಗಾಯಿತು ಪತ್ರಕೆಯಲ್ಲಿ ಹಾಗೂ ಯೂಟ್ಯಬ್‌ ಚಾನಲ್‌ ನಲ್ಲಿ ವರದಿ ಮಾಡಿತು. ಆ ವರದಿಯಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ  ಎಚ್ಚೆತ್ತುಕೊಂಡಿವೆ. ಕ್ಯಾಂಟೀನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳುವ ಪ್ರಕಾರ ಸರ್ಕಾರದಿಂದ ಸುಮಾರು 3 ಕೋಟಿ ರೂ.ಗಳಷ್ಟು ಬಿಲ್ ಪಾವತಿಯಾಗಿರಲಿಲ್ಲ. ಸಿದ್ದರಾಮಯ್ಯ ಸರ್ಕಾರ ಆಧಿಕಾರಕ್ಕೆ ಬರುವ ಮೊದಲು ರಾಜ್ಯವನ್ನಾಳುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ಉದಾಸೀನತೆ ಇತ್ತು. ಮೂರು ವರ್ಷಗಳಿಂದ ಬಿಲ್ ಗಳು ಬಾಕಿಯುಳಿದಿದ್ದವು ಅಂತ ಸಿಬ್ಬಂದಿ ಹೇಳುತ್ತಾರೆ. ಆದರೆ ಖುಷಿ ಸಂಗತಿಯೆಂದರೆ, ಬೆಳಗಾಯಿತು ವಾರ್ತೆ ವರದಿ ಬಿತ್ತರಗೊಂಡ ಬಳಿಕ ಜಿಲ್ಲಾಡಳಿತ ಕ್ಯಾಂಟೀನ್ ನಡೆಸುವ ವ್ಯಕ್ತಿಯನ್ನು ಕರೆಸಿ ಮಾತಾಡಿದೆ ಮತ್ತು ಎಂಟ್ಹತ್ತು ದಿನಗಳಲ್ಲಿ ಬಿಲ್ ಗಳನ್ನು ಚುಕ್ತಾ ಮಾಡುವ ಭರವಸೆ ಸಹ ನೀಡಿದೆ. ಅದೇ ಹಿನ್ನೆಲೆಯಲ್ಲಿ ಕ್ಯಾಂಟೀನ್ ಓಪನ್ ಆಗಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸಂತಸವನ್ನುಂಟು ಮಾಡಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles