23.5 C
Bellary
Wednesday, June 12, 2024

Localpin

spot_img

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ


ಬೆಳಗಾಯಿತು ವಾರ್ತೆ
ಬಳ್ಳಾರಿ: ಮಕ್ಕಳಿಕೆ ವಿದ್ಯಾಭ್ಯಾಸದಲ್ಲಿ ಹುರಿದುಂಬಿಸುವ ಸಲುವಾಗಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನಿಂದ ಪ್ರತಿವರ್ಷ 7,8,9 ಮತ್ತು 10ನೇ ತರಗತಿಯ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರು ಹೆಚ್ಚು ಅಂಕಗಳಿಸುವAತೆ ಪ್ರೇರೆಪಿಸಲಾಗುತ್ತಿದೆ ಎಂದು ಶ್ರೀರಾಮ್ ಫೈನಾನ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಧರ್ ಅವರು ಹೇಳಿದರು.

ನಗರದ ಮೋಕಾ ರಸ್ತೆಯಲ್ಲಿರುವ ಕೆಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲ ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಕಷ್ಟ ಪಡುತ್ತಿರುತ್ತಾರೆ. ಇದರಿಂದ ಅವರ ವಿದ್ಯಾಭ್ಯಾಸದಲ್ಲಿ ಕುಂಟಿತ ಉಂಟಾಗುತ್ತದೆ. ಹಾಗಾಗಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಅವರನ್ನು ಓದಿನಕಡೆ ಸೇಳೆಯಲು ನಮ್ಮ ಸಂಸ್ಥೆಯಿAದ ನಗದು ಹಣವನ್ನು ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಇAದು ನಮ್ಮ ಸಂಸ್ಥೆಯಿAದ ಸುಮಾರು 841 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಇನ್ನೂ ಓದಿನ ಕಡೆ ಹೆಚ್ಚು ವಲವನ್ನು ಮೂಡಿಸುತ್ತದೆ. ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೋಡುಸುವ ಸಲುವಾಗಿ ಹಲವಾರು ರೀತಿಯಲ್ಲಿ ಕಷ್ಟ ಪಡುತ್ತಿರುತ್ತಾರೆ. ಇದನ್ನು ಕಂಡು ನಮ್ಮ ಸಂಸ್ಥೆ ಅಲ್ಪ ಮಟ್ಟಿಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

ನಮ್ಮ ಸಂಸ್ಥೆ ಹಲವಾರು ಕಡೆ ಬ್ರಾಂಚ್‌ಗಳನ್ನು ಹೊಂದಿದೆ. ಎಲ್ಲಾ ಕಡೆ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದರ ಸದುಪಯೋಗ ಎಲ್ಲಾ ಬಡ ವಿದ್ಯಾರ್ಥಿಗಳು ಪಡಿದುಕೊಳ್ಳಬೇಕು ಎಂದರು.
ನಮ್ಮ ಫೈನಾನ್ಸ್ನಲ್ಲಿ ಹಲವು ರೀತಿಯಲ್ಲಿ ಫೈನಾನ್ಸ್ ನೀಡಲಾಗುತ್ತದೆ ಎಂದರು.

ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿಯವರು ಮಾತನಾಡಿ, ಇಂದಿನ ದಿನಗಳಲ್ಲಿ ಬಡ ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶ್ರೀರಾಮ್ ಫೈನಾನ್ಸ್ ನವರು ಬಡ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಅವರಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಬಹಳ ಒಳ್ಳೆಯ ಕೆಲಸವಾಗಿದೆ. ಇದು ಬಡ ಮಕ್ಕಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿವಿ ಸಂಘದ ಕಾರ್ಯದರ್ಶಿ ಹೆಚ್ ಎಂ ಗುರುಸಿದ್ಧಸ್ವಾಮಿ, ಉಪ ಅರಣ್ಯಾಧಿಕಾರಿ ಸಂಧೀಫ್ ಹೆಚ್ ಸೂರ್ಯವಂಶಿ, ಉಡೇದ ಬಸವರಾಜ್, ಬಿ. ಮಹಾರುದ್ರಗೌಡ, ಶ್ರೀರಾಮ್ ಫೈನಾನ್ಸ್ನ ರಿಜೀನಲ್ ಮ್ಯಾನೇಜರ್ ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles