ಬೆಳಗಾಯಿತು ವಾರ್ತೆ | Www.belagayithu.in
ಕೊಟ್ಟೂರು: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಇಡೀ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಹೊಂದಿರುತ್ತಾನೆ. ಶಿಕ್ಷಕ ವೃತ್ತಿಯು ಈ ಜಗತ್ತಿನ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಹಾಗೂ 2024ರಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ 7ನೇ ಆಯೋಗದ ವೇತನ ಕಲ್ಪಿಸುವಂತೆ ಸರ್ಕಾರ ಗಮನಕ್ಕೆ ತರುತ್ತೇನೆ ಹೇಳಿದರು.
ಪಟ್ಟಣದ ಮರಳು ಸಿದ್ದೇಶ್ವರ ಸಭಾಂಗಣದಲ್ಲಿ ಶನಿವಾರದಂದು ಕೊಟ್ಟೂರು ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136 ನೇ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ ನೇಮಿರಾಜ್ ನಾಯ್ಕ್ ದೀಪ ಹಚ್ಚುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಜಗತ್ತಿನಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾದದ್ದು. ಒಂದು ಮಗು ಸರ್ವತೋಮುಖ ಅಭಿವೃದ್ಧಿ ಹೊಂದಬೇಕಾದರೆ ಅದರ ಹಿಂದೆ ಶಿಕ್ಷಕನ ಪಾತ್ರ ದೊಡ್ಡದಾಗಿರುತ್ತದೆ. ಇಂಥ ಪವಿತ್ರ ಶಿಕ್ಷಕರ ವೃತ್ತಿಯು ಕಾಣಬಹುದಾಗಿದೆ. ಒಬ್ಬ ಶಿಲ್ಪವು ಒಂದು ಕಲ್ಲನ್ನು ಹೇಗೆ ಮೂರ್ತಿಯನ್ನಾಗಿ ಮಾಡುತ್ತಾನೆ ಒಂದು ಮಗುವಿನ ತಿದ್ದಿ ತೀಡಿ ಆ ಮಗುವಿನ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕನ ಕೈಯಲ್ಲಿ ಇರುತ್ತದೆ. 24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು 7ನೇ ಆಯೋಗವೇತನ ಅವರಿಗೂ ನೀಡುವಂತೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಹೇಳಿದರು.
ಕೊಟ್ಟೂರಿನ ರಾಮಪ್ಪ ಮೇಷ್ಟ್ರು ಸ್ಮರಣೆ ಶಿಕ್ಷಕರ ಕೊಡುಗೆ ಅಪಾರವಾದದ್ದು ಶಿಕ್ಷಕರನ್ನು ದೇವರ ಸಮಾನವಾಗಿ ನೋಡುವ ಸಂಸ್ಕೃತಿ ನಮ್ಮದು ಶಿಕ್ಷಕರ ಗೌರವ ಹೆಚ್ಚಿಸುವಂತ ಕೆಲಸವನ್ನು ಮಾಡೋಣ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಅಣಜಿ ಸಿದ್ದಲಿಂಗಪ್ಪ ಮಾತನಾಡಿದರು ಕೊಟ್ಟೂರು ತಾಲೂಕು ಘೋಷಣೆಯಾಗಿ ಐದಾರು ವರ್ಷ ಕಳೆದರೂ ನಮ್ಮ ತಾಲೂಕಿನಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿ ಇನ್ನು ಆರಂಭವಾಗಿಲ್ಲ ಇದರಿಂದ ನಮ್ಮ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳು ಸಾರ್ವಜನಿಕರೇ ಶಿಕ್ಷಣ ಇಲಾಖೆ ಕೆಲಸಗಳನ್ನು ಮಾಡಿಸಿಕೊಳ್ಳಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರಿಗೆ ಶಾಶ್ವತವಾದ ತಾಲೂಕು ಗುರುಭವನ ನಿರ್ಮಾಣ ಮಾಡಿಕೊಡಬೇಕು. ಹಾಗೂ ಎನ್ ಪಿ ಎಸ್ ಹೋಗಲಾಡಿಸಿ ಓ ಪಿ ಎಸ್ ಜಾರಿಗೆ ತರಬೇಕು ಶಾಸಕರಿಗೆ ಮನವಿ ಮಾಡಿಕೊಂಡರು.
24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರಾದ ಜಿ.ಕೆ ಅಮರೇಶ್, ತಾಲೂಕು ಪಂಚಾಯಿತಿ ಇ ಓ ಡಾ. ಆನಂದ್ ಕುಮಾರ್, ಜಿಲ್ಲಾ ಪಂ. ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್, ಪ. ಪಂ. ಅಧ್ಯಕ್ಷರಾದ ಶ್ರೀಮತಿ ಬಿ.ರೇಖ ರಮೇಶ್, ಪಟ್ಟಣ ಪಂ. ಉಪಾಧ್ಯಕ್ಷರಾದ ಜಿ. ಸಿದ್ದಯ್ಯ, ತಾಲೂಕು ಮಟ್ಟದ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.





