ಕಾರ್ಮಿಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಬೆಳಗಾಯಿತು ವಾರ್ತೆ | Www.belagayithu.in

ಕುರುಗೋಡು : ಕಾರ್ಮಿಕರ ಶ್ರಮವನ್ನು ಬಳಸಿ ಬಿಸಾಡುವ ಪದ್ಧತಿ ಕೈಬಿಟ್ಟು, ನಿರಂತರ ದುಡಿಯುವ ಶ್ರಮಿಕರಿಗೆ ಕಾನೂನಾತ್ಮಕ ಬೇವರಿ ಪಾಲು ಕೇಳಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಗುತ್ತಿಗೆ ಕಾರ್ಮಿಕರು ಹಾಗೂ ಸಿಐಟಿಯು ಸಂಯೋಜಿತ ಬಳ್ಳಾರಿ ಧರ್ಮಲ್ ಪವರ್ ಸ್ಟೇಷನ್ ಗುತ್ತಿಗೆ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಯುವ ಸೈನ್ಯ ಬೆಂಬಲದೊಂದಿಗೆ ಕುಡತಿನಿಯ ಬಿಟಿಪಿಎಸ್ ಮೆಟೀರಿಯಲ್ ಗೇಟ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಐದನೇ ದಿನ ಮುಂದುವರೆದಿದೆ.

ನಂತರ ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ ಮಾತನಾಡಿ, ಇಲ್ಲಿನ ಬಿಟಿಪಿಎಸ್ ಕಾರ್ಖಾನೆಯಲ್ಲಿ ಸಾಕಷ್ಟು ವರ್ಷಗಳಿಂದ ಗುತ್ತಿಗೆ ಕಾರ್ಮಿಕರು ದುಡಿಯುತ್ತಾ ಬಂದಿದ್ದಾರೆ. ಆದರೆ, ಈ ಕಾರ್ಮಿಕರಿಗೆ ಕನಿಷ್ಠ ವೇತನ ಇಲ್ಲದೇ, ಇವರ ಬದುಕು ಅತಂತ್ರವಾಗಿ, ಆಧುನಿಕ ಯುಗದಲ್ಲಿ ಜೀವನ ಕಷ್ಟಕರವಾಗಿದೆ. ಜೀವನ ನಿರ್ವಹಿಸುವುದು ಹೇಗಪ್ಪಾ ಎಂಬ ಆಲೋಚನೆ ಕಾರ್ಮಿಕರನ್ನು ಕಾಡುತ್ತಿದೆ. ಕಾರ್ಖಾನೆಯವರು ಕಾರ್ಮಿಕರನ್ನು ದುಡಿಸಿಕೊಳ್ಳುವುದು ಅವರ ಪ್ರವೃತಿಯಾಗಿದೆ. ಕಾರ್ಮಿಕರ ಗೋಳು ಕೇಳುತ್ತಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ದೊರಕಬೇಕು. ಇಎಸ್‌ಐ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು. ಭವಿಷ್ಯ ನಿಧಿ ಜಾರಿಗೊಳಿಸುವ ಜತೆಗೆ ಪ್ರೋತ್ಸಾಹ ಧನವನ್ನು ಪ್ರಾಮಾಣಿಕವಾಗಿ ಯಾ ಶಾ ಹ್ಯಾಂಡಲಿಂಗ್ ಕಾರ್ಮಿಕರಿಗೆ ನೀಡಬೇಕು. ಹೀಗೆ ಹಲವು ಬೇಡಿಕೆಗಳನ್ನು ಕಾರ್ಖಾನೆಯಿಂದ ನೀಡಬೇಕು. ಕಾರ್ಮಿಕರ ಬೆನ್ನೆಲುಬು ಮುರಿಸಿಕೊಳ್ಳುವುದು ಮಾತ್ರ ಗೊತ್ತು. ಆದರೆ, ಅವರಿಗೆ ಸಂಕಷ್ಟವನ್ನು ಆಲಿಸಿ, ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿದೆ. ಕಾರ್ಖಾನೆ ನಡೆಯುತ್ತಿರುವುದು ಕಾರ್ಮಿಕರಿಂದ. ಕಾರ್ಮಿಕರು ಇಲ್ಲವಾದರೆ, ಕಾರ್ಖಾನೆ ನಡೆಯುವುದಿಲ್ಲ. ಹೀಗಿದ್ದರೂ, ಅಧಿಕಾರಿಗಳು ನಿರ್ಲಕ್ಷö್ಯವಹಿಸುತ್ತಿರುವುದ ದುರಂತವಾಗಿದೆ. ಇದರಿಂದ ಕಳೆದು ಐದು ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ಮುಂದುವರೆದಿದ್ದು, ಬೇಡಿಕೆಗಳು ಈಡೇರುವವರಿಗೂ ಧರಣಿ ನಡೆಯಲಿದೆ. ಮುಂದಿನ ದಿನದಲ್ಲಿ ಧರಣಿಯ ರೂಪ ತೀವ್ರಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಯುವ ಸೈನ್ಯ ಅಧ್ಯಕ್ಷ ಸಂಪತ್‌ಕುಮಾರ್, ಕಾರ್ಮಿಕ ಮುಖಂಡರಾದ ವಿರೇಶ, ಸಂಜೀವ, ಶಿವಶಂಕರ್, ಮಲ್ಲಿಕಾರ್ಜುನ, ರ‍್ರಿಸ್ವಾಮಿ, ಶರಣ, ರುದ್ರಮ್ಮ, ಮಲ್ಲಮ್ಮ, ಗದ್ಯಪ್ಪನವರ ಮಲ್ಲಮ್ಮ, ಜಾನಕಮ್ಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles