ಬೆಳಗಾಯಿತು ವಾರ್ತೆ
ಬಳ್ಳಾರಿ : ಮೋಕಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 2008-09 ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಹಳೆ ವಿದ್ಯಾರ್ಥಿಯಾದ ತಿಮ್ಮಪ್ಪ.ಜಿ ಅವರು ಗುರುಗಳ ಬಗ್ಗೆ ಮಾತನಾಡಿದರು, ಮೇಣದ ಬತ್ತಿ ಉರಿದುರಿದು ಜಗತ್ತಿಗೆ ಬೆಳಕಾದಂತೆ, ಶಿಕ್ಷಕರು ಸವೆದೂ ವಿದ್ಯಾರ್ಥಿ ಬಳಗಕ್ಕೆ ಬೆಳಕಾಗುವ ದೇವರು ನೀವುಗಳು, ಎಲ್ಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸಿ ಶಿಸ್ತು, ನೀತಿ, ಸತ್ಯ, ಹಾಗೂ ಪ್ರಾಮಾಣಿಕ ಮಾರ್ಗದಲ್ಲಿ ನಡೆಸಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿ ಅವರ ಉನ್ನತಿಗಾಗಿ ಚಿಂತಿಸಿ ಕಲ್ಲನ್ನೇ ಶಿಲ್ಪವಾಗಿಸಿದ ಮಹಾಗುರುಗಳು ತಾವು ಎಂದು ಶಿಕ್ಷಕರಿಗೆ ಹೇಳಿದರು.
ಅಂತಾ ಹಳೆ ವಿದ್ಯಾರ್ಥಿಯಾದ ತಿಮ್ಮಪ್ಪ ಜಿ ಅವರು ವೇದಿಕೆಯ ಮೇಲೆ ಮಾತನಾಡಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಶಿಕ್ಷಕಿಯರು ಮತ್ತು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಹಳೆ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.