34.5 C
Bellary
Wednesday, May 15, 2024

Localpin

spot_img

ಸಲಾರ್ ಚಿತ್ರದ ಟಿಕೆಟ್ ಬರೋಬ್ಬರಿ 2000ರೂ…!

ಬಳ್ಳಾರಿ: ಬಳ್ಳಾರಿಯಲ್ಲಿ ಸಲಾರ್ ಚಿತ್ರದ ಬ್ಲಾಕ್ ಟಿಕೆಟ್ ಬರೋಬ್ಬರಿ 2ಸಾವಿರ ರೂಪಾಯಿಗೆ ಮಾರಾಟವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ…!
ಹೌದು ಇದೇ ಡಿ.22ರಂದು ಶುಕ್ರವಾರದಂದು ಬಾಹುಬಲಿ ಖ್ಯಾತಿಯ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಲಾರ್ ಚಿತ್ರ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದ್ದು ಸಲಾರ್ ಚಿತ್ರದ ಮೊದಲ ಶೋ ಟಿಕೆಟ್ ಬರೋಬ್ಬರಿ 500ರೂ. 1500ರೂ. 2000ರೂ ವರೆಗೆ ಬ್ಲಾಕ್ ನಲ್ಲಿ ಮಾರಾಟವಾಗಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ನಡಿಯಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರಕ್ಕೆ ಕನ್ನಡದ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಸಲಾರ್ ಚಿತ್ರ ಐದು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles