ಬೆಳಗಾಯಿತು ವಾರ್ತೆ
ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲಾ ಹಾಗೂ ಶಕ್ತಿ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷ ದಮ್ಮುರು ಶೇಖರ್ ಅವರು ತಿಳಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿ.ಸುನೀಲ್ ಕುಮಾರ್ ರೆಡ್ಡಿ, ಹುಂಡೇಕರ್ ರಾಜೇಶ್, ಬಳ್ಳಾರಿ ಗ್ರಾಮಾಂತರದಿಂದ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಬಿ.ಮಲ್ಲಿಕಾರ್ಜುನ ಆಚಾರ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷರಾಗಿ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಉಮಾರಾಜ್, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕೌಲ್ ಬಜಾರ್ ಚಂದ್ರ, ಜಿ.ತಿಮ್ಮಪ್ಪ, ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ದರೂರು ಶಾಂತನಗೌಡ ಮತ್ತು ಸಿದ್ದಯ್ಯಸ್ವಾಮಿ ಹೆಚ್. ಕೆ, ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಭುಶೇಖರ್ ಗೌಡ ಮತ್ತು ಕೆ.ಮಲ್ಲಯ್ಯ, ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಶ್ರೀನಿವಾಸುಲು ನೇಮಕವಾಗಿದ್ದಾರೆ.
ಜಿಲ್ಲಾ ಕಾರ್ಯದರ್ಶಿಗಳಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಗೋವಿಂದರಾಜಲು, ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ನಾಗಪ್ಪ, ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ತಿರುಮಲ, ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಪಿ.ಜ್ಯೋತಿ ನೇಮಕವಾಗಿದ್ದಾರೆ.
ಜಿಲ್ಲಾ ಖಜಾಂಚಿಯಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಕೆ.ಸತೀಶ್, ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿಗಳಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ವೀರ ಶೇಖರರೆಡ್ಡಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನರಾಲ ರೋಶಿರೆಡ್ಡಿ ನೇಮಕವಾಗಿದ್ದಾರೆ.
ಜಿಲ್ಲಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಂಪಿ ರಮಣ, ಜಿಲ್ಲಾ ಹಿಂದುಳಿದ ವರ್ಗಗಳ ಶಕ್ತಿ ಘಟಕದ ಅಧ್ಯಕ್ಷರಾಗಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕೊಳಗಲ್ ಅಂಜಿನಿ, ಜಿಲ್ಲಾ ಅಲ್ಪಸಂಖ್ಯಾತರ ಶಕ್ತಿ ಘಟಕದ ಅಧ್ಯಕ್ಷರಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಶೇಕ್ ದಾದಾಪೀರ್, ಜಿಲ್ಲಾ ರೈತ ಶಕ್ತಿ ಘಟಕ ಅಧ್ಯಕ್ಷರಾಗಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಜಿ.ಶಿವಾರೆಡ್ಡಿ (ಪಿ.ಡಿ.ಹಳ್ಳಿ), ಜಿಲ್ಲಾ ಪರಿಶಿಷ್ಟ ಪಂಗಡ ಶಕ್ತಿ ಘಟಕದ ಅಧ್ಯಕ್ಷರಾಗಿ (ಎ ಸ್.ಟಿ) ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಎ.ರಾಘವೇಂದ್ರ, ಜಿಲ್ಲಾ ಕಾರ್ಮಿಕ ಶಕ್ತಿ ಘಟಕ ಅಧ್ಯಕ್ಷರಾಗಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಮಾರೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಶಕ್ತಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ್ಪಾರ್ ಹನುಮೇಶ್, ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್) ಘಟಕದ ಅಧ್ಯಕ್ಷ ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್ ವಿಧಾನಸಭಾ ಕ್ಷೇತ್ರಕ್ಕೆ ಹೆಚ್.ಇಕ್ಸಾಲ್, ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್) ಅಲ್ಪಸಂಖ್ಯಾತ ಶಕ್ತಿ ಘಟಕದ ಅಧ್ಯಕ್ಷರಾಗಿ ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್) ವಿಧಾನಸಭಾ ಕ್ಷೇತ್ರಕ್ಕೆ ದಾದಾಪೀರ್ ನೇಮಕವಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರಾದ ದಮ್ಮೂರು ಶೇಖರ್ ಅವರು ತಿಳಿಸಿದ್ದಾರೆ.