ಬಳ್ಳಾರಿ ಜೈಲಿನ ಮುಂದೆ ಮಹಿಳಾ ಅಭಿಮಾನಿ ಹಠ

ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ: ನಗರದ ಕೇಂದ್ರ ಕಾರಗೃಹದಲ್ಲಿ ಸೆರೆಯಾಗಿರುವ ಆರೋಪಿ ನಟ ದರ್ಶನ್ ನೋಡಬೇಕು, ಅವರ ಜತೆ ಒಂದೆರಡು ಮಾತನಾಡಬೇಕು ಎಂದು ಮಹಿಳಾ ಅಭಿಮಾನಿಯೊಬ್ಬರು ಪಟ್ಟು ಹಿಡಿದ ಘಟನೆ ಜೈಲಿನ ಎದುರು ನಡೆದಿದೆ. ಕಲಬುರಗಿ ಮೂಲದ ಬೆಂಗಳೂರಿನ ಆರ್ ಆರ್ ನಗರ ನಿವಾಸಿ ಲಕ್ಷ್ಮೀ ಎನ್ನುವ ಮಹಿಳೆ ಬೆಂಗಳೂರಿಂದ ಬಳ್ಳಾರಿ ಜೈಲಿಗೆ ಗುರುವಾರ ಬೆಳಗ್ಗೆ ಆಗಮಿಸಿ, ನಟ ದರ್ಶನ್ ಅವರನ್ನು ನೊಡಲೇ ಬೇಕು ಅಂತಾ ಹಠ ಹಿಡಿದು ಜೈಲು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಈ ವೇಳೆ ಜೈಲಿನ ಭದ್ರತಾ ಸಿಬ್ಬಂದಿ ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸುತ್ತಿದ್ದಂತೆ ನಾನು ದರ್ಶನ್ ಅವರನ್ನು ಮದುವೆ ಆಗೋದಕ್ಕೂ ಸಿದ್ಧವಾಗಿ ಬಂದಿರುವೆ ಎಂದಿದ್ದಾಳೆ. ವಿಜಯಲಕ್ಷ್ಮಿ ತರ ನಾನೂ ಮದುವೆ ಆಗುತ್ತೇನೆ. ನನಗೆ ದರ್ಶನ್ ಅಂದ್ರೆ ಇಷ್ಟ. ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋದರೂ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ. ನಟ ದರ್ಶನ್ ಅವರಿಗೆ ಹಣ್ಣು ಕೊಟ್ಟು ನೋಡಿ ಹೊಗುವೆ ಎಂದು ಪಟ್ಟು ಹಿಡಿದಿದ್ದ ಲಕ್ಷ್ಮಿಯನ್ನು ಕೊನೆಗೆ ಜೈಲಿನ ಸಿಬ್ಬಂದಿ ಮನವೊಲಿಸಿ ವಾಪಾಸ್ ಕಳುಹಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles