23.2 C
Bellary
Tuesday, January 13, 2026

Localpin

spot_img

ಸೈಯದ್ ನಾಸಿರ್ ಹುಸೇನ್‌ ಬಳ್ಳಾರಿ ಕಚೇರಿ ಮುತ್ತಿಗೆಗೆ ಯತ್ನ

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ: ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿರುವ ಆರೋಪದ ಬೆನ್ನಲ್ಲೇ ಸೈಯದ್ ನಾಸಿರ್ ಹುಸೇನ್‌ ಅವರ ಬಳ್ಳಾರಿಯ ಕಚೇರಿಯ ಮುಂದೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ಪರವಾಗಿ ಘೋಷಣೆ ಕೂಗಿದ ಆರೋಪ ಹಿನ್ನೆಲೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬಳ್ಳಾರಿಯ ಮೋತಿ ಸರ್ಕಲ್ ಬಳಿಯ ಬೂಡಾ ಕಚೇರಿಯ ಆವರಣದಲ್ಲಿರುವ ನಾಸಿರ್ ಹುಸೇನ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಕಚೇರಿ ಮುಂದೆ ಹಾಕಿದ್ದ ನಾಮಫಲಕ ಕಿತ್ತು ಹಾಕಲು ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. 

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles