29.3 C
Bellary
Wednesday, May 15, 2024

Localpin

spot_img

ಪಾಕ್ ಪರ ಘೋಷಣೆ ಪ್ರಕರಣ; ಎನ್ ಐಎ ತನಿಖೆಗೆ ನೀಡಿ: ರಾಮುಲು

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ:  ಪಾಕ್ ಪರ ಘೋಷಣೆ ಪ್ರಕರಣವನ್ನು ಪತ್ತೆ ಹಚ್ಚಲು ಸರ್ಕಾರ ಎಫ್ ಎಸ್ ಎಲ್ ಗೆ ವರದಿ ಕೊಡುವಂತೆ ಕೇಳಿದೆ ಆದರೆ ನಮಗೆ ಎಫ್ ಎಸ್ ಎಲ್ ಮೇಲೆ ನಂಬಿಕೆ ಇಲ್ಲ ಆದ್ದರಿಂದ
ಎನ್ ಐಎ ಎ ಮೂಲಕ ತನಿಖೆ ನಡೆಸುವಂತೆ ಮಾಜಿ ಸಚಿವ ಶ್ರೀರಾಮುಲು ಅವರು ಒತ್ತಾಯಿಸಿದ್ದಾರೆ.

ನಗರದ ಮಾಜಿ ಸಚಿವ ಶ್ರೀರಾಮುಲು ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಿಡಿಗೇಡಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಫ್ ಎಸ್ ಎಲ್ ವರದಿ ಬರುವ ಮುಂಚೆಯೇ ಡಿಕೆ ಶಿವಕುಮಾರ್,ಸುರ್ಜೇವಾಲ ಸೇರಿದಂತೆ ಮತ್ತಿತರು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಎಫ್ ಎಸ್ ಎಲ್ ವರದಿಯನ್ನು ತಿರುಚುವ ಸಾಧ್ಯತೆ ಇದೆ‌. ವರದಿ ನಮ್ಮ ಪರ ಬರುತ್ತೆ ಎಂಬ ವಿಶ್ವಾಸವಿಲ್ಲ ಆದ್ದರಿಂದ ಈ ಪ್ರಕರಣವನ್ನು ಎನ್ ಐಎ ಎ ತನಿಖೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸಭೆಗೆ ಎರಡನೇ ಬಾರಿಗೆ ಸಂಸದ ನಾಸೀರ್ ಹುಸೇನ್ ಅವರು ಆಯ್ಕೆಯಾಗಿದ್ದಾರೆ. ಚುನಾವಣೆ ವಿಜಯೋತ್ಸವ ಸಂದರ್ಭದಲ್ಲಿ ಕಿಡಿಗೇಡಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಆದರೆ ಸಂಸದ ನಾಸೀರ್ ಹುಸೇನ್ ಅವರು ಪಾಕಿಸ್ತಾನದ ಪರ ಘೋಷಣೆ ಕೂಗಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ತುಷ್ಟೀಕರಣ ಮಾಡುವ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಪರ  ನಿಂತಿದೆ ಎಂದು ಅನುಮಾನ ಮೂಡುತ್ತದೆ ಎಂದರು.

ವಿಧಾನ ಸೌಧದಲ್ಲಿ ಕಿಡಿಗೇಡಿಗಳನ್ನು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಪ್ರಶ್ನಿಸಿದ ಮಾಧ್ಯಮದವರ ವಿರುದ್ಧವೇ ಸಂಸದ ನಾಸೀರ್ ಹುಸೇನ್ ಅವರು ದುರ್ವರ್ತನೆ ತೋರಿದ್ದಾರೆ ಎಂದರು.

ಸರ್ಕಾರ ಮನಸ್ಸು ಮಾಡಿದ್ದರೆ ಪಾಕ್ ಪರ ಘೋಷಣೆ ಕೂಗಿದ ವರನ್ನು ತಕ್ಷಣವೆ ಬಂಧಿಸಿ, ಜೈಲಿಗೆ ಹಾಕಬೇಕಿತ್ತು ಆದರೆ ಆ ಕೆಲಸ ಮಾಡಲಿಲ್ಲ ಎಂದರು.

ಶಕ್ತಿ ಸೌಧದಲ್ಲಿ ಭಾರತ ಮಾತೆಗೆ ಪತ್ರಕರ್ತರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಕ್ತಿ ಸೌಧದಲ್ಲಿ ಬಾಂಬ್ ಇಡುವುದಿಲ್ಲ ಎಂಬುದು ಏನು ಗ್ಯಾರಂಟಿ ಇಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ನಮ್ಮ ದೇಶದ ಅನ್ನ, ನೀರು,ಗಾಳಿ ಕುಡಿದು ಪಾಕಿಸ್ತಾನದ ಪರ ಘೋಷಣೆ ಕೂಗುವವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ ನನ್ನ ಸ್ವಂತ ಹಣದಲ್ಲಿ ಅವರಿಗೆ ಪ್ಲೈಟ್ ಟಿಕೆಟ್ ಕೊಡಿಸುವೆ ಎಂದರು.

ಬಳ್ಳಾರಿ ಲೋಕಸಭೆ ಸಭಾ ಚುನಾವಣೆ ಟಿಕೆಟ್ ಹಾಲಿ ಸಂಸದ ದೇವೇಂದ್ರಪ್ಪ ಅವರಿಗೆ ನೀಡಿದರೆ ಅವರ ಪರವಾಗಿ ಕೆಲಸ ಮಾಡುವೆ ಒಂದು ವೇಳೆ ನನಗೆ ಟಿಕೆಟ್ ನೀಡಿದರೂ ಸ್ಪರ್ಧಿಸುವೆ ಎಂದರು.

ಜನಾರ್ಧನ ರೆಡ್ಡಿ ಅವರು ನಮ್ಮ ಭಾಗದಲ್ಲಿ ಪ್ರಭಾವಿ ನಾಯಕರಾಗಿರುವುದರಿಂದ ಅವರನ್ನು ಪಕ್ಷಕ್ಕೆ ಕರೆದು ಕೊಂಡರೆ ಅನುಕೂಲವಾಗಲಿದೆ ಎಂದು ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾರುತಿ ಪ್ರಸಾದ್, ಓಬಳೇಶ್, ಗುರುಲಿಂಗನ ಗೌಡ ಸೇರಿದಂತೆ ಮತ್ತಿತರರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles