ಬೆಳಗಾಯಿತು ವಾರ್ತೆ
ಕೊಪ್ಪಳ : ಬಲ್ದೋಟ ಉಕ್ಕು ಕಾರ್ಖಾನೆ ಸ್ಥಾಪಿಸುವುದರಿಂದ ವಾಣಿಜ್ಯ ಆರ್ಥಿಕ ಉದ್ಯಮ ವಹಿವಾಟು, ನಿರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ಇತರರ ಬೆಳವಣಿಗೆ ಆಗುತ್ತದೆ ಎಂದು ಕಂಪನಿಗೆ ಭೂಮಿ ನೀಡಿದ ಹಾಲವರ್ತಿ, ಬಸಾಪುರ, ಬೆಳವಿನಾಳ ಸೇರಿದಂತೆ ಇತರ ಗ್ರಾಮಗಳ ರೈತರು ಹೇಳಿದರು.
ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕಂಪನಿ ಬರುವುದರಿಂದ ಸ್ಥಳೀಯರಿಗೆ ಉದ್ಯೋಗವಕಾಶ, ವಿದ್ಯಾಭ್ಯಾಸ,ಮಹಿಳಾ ಸಬಲೀಕರಣ,ಸಸಿ ನೆಡುವುದು, ಶೌಚಾಲಯ ನಿರ್ಮಾಣ, ಕೌಶಲಅಭಿವೃದ್ಧಿ
ಯಾಗುತ್ತದೆ,ನಾವು ಭೂಮಿಯನ್ನು ಕಳೆದುಕೊಂಡು 18 ವರ್ಷವಾಯಿತು ಗ್ರಾಮಗಳ ಯುವಕರಿಗೆ ಉದ್ಯೋಗವಿಲ್ಲ ಕೆಲಸವಿಲ್ಲದ ನಿರುದ್ಯೋಗಿಯಾಗಿದ್ದಾರೆ ಬಿ ಎಸ್ ಪಿ ಎಲ್ ಕಂಪನಿ ಪಾರಂಭವಾದರೆ ನೇರವಾಗಿ ನಮ್ಮ ಯುವಕರಿಗೆ ಉದ್ಯೋಗ ಸಿಗುತ್ತದೆ, ಗಾಮದ ಆರ್ಥಿಕ ಅಭಿವೃದಿಯಾಗುತ್ತದೆ, ಹಾಗಾಗಿ ನಮಗೆ ಕಂಪನಿ ಪ್ರಾರಂಭವಾಗಬೇಕು.ಮುAದುವರೆದು ಈ ಸಂಸ್ಥೆಯು ಗ್ರಾಮಗಳ ಜಾತ್ರೆ ಸಂದರ್ಭದಲ್ಲಿ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ವಿವಿಧ ಗ್ರಾಮಗಳಿಗೆ ನೀರನ್ನು ತಮ್ಮ ಸ್ವಂತ ಖರ್ಚಿನಿಂದ ಒದಗಿಸಿರುತ್ತಾರೆ. ತಮಗೂ ತಿಳಿದಂತೆ ಕೊಪ್ಪಳ ಜಿಲ್ಲೆಯಲಿರುವ ರೈತರ ಜಮೀನನ್ನು ಕಂಪನಿಯು ಉಕ್ಕಿನ ಕಾರ್ಖಾನೆ ನಿರ್ಮಿಸಲು ಕೆ.ಐ.ಎ.ಡಿ.ಬಿ ಮೂಲಕ ಭೂಸ್ವಾಧೀನವಾದರೆ ಮತ್ತು ಕಳೆದ 10 ವರ್ಷಗಳಲ್ಲಿ ರೈತರ ಮಕ್ಕಳ ವಿಧ್ಯಾಭ್ಯಾಸ ಮುಗಿಸಿ ಪದವೀಧರರರಾಗಿದ್ದು ಸುತ್ತಮುತ್ತಲಿನ ಗ್ರಾಮದ ಜನರು ಈ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಕಾಯುತಿದ್ದಾರೆ. ಈ ಬಲ್ದೋಟ ಸಂಸ್ಥೆಯು ನಮ್ಮ ಗಾಮಗಳಿಗೆಲ್ಲ ಉದ್ಯೋಗ ಮತ್ತು ಗುತ್ತಿಗೆ ಸೇವೆಗಳು ಒದಗಿಸುತ್ತಿರುವ ಈ ಬಲ್ದೋಟ ಸಂಸ್ಥೆಯು ಉಕ್ಕು ಕಾರ್ಖಾನೆ ಸ್ಥಾಪನೆ ಚಟುವಟಿಕೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಇದಕ್ಕೆ ಸುತಮುತಲ್ಲಿನ ಗಾಮದ ಜನರ ಬೆಂಬಲವಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಕೌದಿ, ಜಡಿ ಸ್ವಾಮಿ ಇಳಿಗೇರ, ಶಾಂತಪ್ಪ ಪೂಜಾರ, ವೆಂಕಯ್ಯ ಹಿರೇಮಠ, ಗೋಣಿಬಸಪ್ಪ, ಕಾಮಣ್ಣ ಬಸಾಪುರ ಉಪಸ್ಥಿತರಿದ್ದರು.