ಬಳ್ಳಾರಿ: ಚುನಾವಣೆ ಕೆಲಸ ಹಾಗೂ ಇಲಾಖೇತರ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸದಂತೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಅಧ್ಯಕ್ಷರಾದ ಉಮಾದೇವಿ ಅವರು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ 6ವರ್ಷದೊಳಗಿನ ಮಕ್ಕಳನ್ನು ಮುಂದಿನ ಪ್ರಜೆಗಳನ್ನಾಗಿ ಒಪ್ಪಿಸುವ ಅತ್ಯಂತ ಮಹತ್ತರವಾದ ಉದ್ದೇಶ ಇಟ್ಟುಕೊಂಡಿದೆ. ಐಸಿಡಿಎಸ್ ಯೋಜನೆಯು ಪ್ರಾರಂಭವಾದದ್ದು 6ವರ್ಷದೊಳಗಿನ ಮಕ್ಕಳ ಮಾನಸಿಕ ಬೆಳವಣಿಗೆ 80ರಷ್ಟು ದೈಹಿಕ ಬೆಳವಣಿಗೆ 40ರಷ್ಟು ಆಗುತ್ತಿದೆ ಈ ಹಂತದಲ್ಲಿ ಮಗುವಿಗೆ ಬೇಕಾದ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಲಿಕ್ಕೆ ಪ್ರಾರಂಭಿಸಲಾಗಿದೆ ಎಂದರು.