35.8 C
Bellary
Saturday, April 26, 2025

Localpin

spot_img

ಬಳ್ಳಾರಿ ರೈಲ್ವೆ ಇಲಾಖೆ ಮೇಲೆ ಮಲತಾಯಿ ಧೋರಣೆ

ಬೆಳಗಾಯಿತು ವಾರ್ತೆ

ಬಳ್ಳಾರಿ: ದಿನ ನಿತ್ಯ ಸಂಚರಿಸುವ ಸೋಲಾಪುರ್ ಗದಗ್ ಎಕ್ಸ್ ಪ್ರೆಸ್ ಮತ್ತು ಮುಂಬೈ ಸೊಲ್ಲಾಪುರ್ ಗದಗ್ ಎಕ್ಸ್ ಪ್ರೆಸ್ ರೈಲುಗಳನ್ನು ಬಳ್ಳಾರಿಯ ವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಮ ಸಮಿತಿ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಯ್ಯ ಸ್ವಾಮಿ ಅವರು ಎಂದು ಒತ್ತಾಯಿಸಿದ್ದಾರೆ.

ದಿನನಿತ್ಯ ಸಂಚರಿಸುವ ರೈಲು ಸಂಖ್ಯೆ 11305 ಹಾಗೂ11306 ಸೋಲಾಪುರ್ ಗದಗ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಹೊಸಪೇಟೆ ವರೆಗೆ ವಿಸ್ತರಿಸುವುದಾಗಿ ರೈಲ್ವೆ ಇಲಾಖೆ ಆದೇಶಿಸಿದೆ ಹಾಗೂ ಅದೇ ರೀತಿ ದಿನನಿತ್ಯ ಸಂಚರಿಸುವ ಮುಂಬೈ ಸೊಲ್ಲಾಪುರ್ ಗದಗ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 11139 ಹಾಗೂ 11140 ರೈಲಿನ ಸೇವೆಯನ್ನು ಹೊಸಪೇಟೆವರೆಗೆ ವಿಸ್ತರಿಸಿರುವದಾಗಿ ರೈಲ್ವೆ ಇಲಾಖೆ ತಿಳಿಸಿರುತ್ತದೆಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಬಹು ವರ್ಷಗಳಿಂದ ಎರಡು ರೈಲುಗಳನ್ನು ಬಳ್ಳಾರಿ ವರೆಗೆ ವಿಸ್ತರಿಸುವಂತೆ ಸಾಕಷ್ಟು ಬಾರಿ ಮನವಿ ಪತ್ರಗಳನ್ನು ಕಳಿಹಿಸಲಾಗಿತ್ತು ನಿಯೋಗದ ಮೂಲಕ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಹಾಗೂ ದೆಹಲಿಯ ರೈಲ್ವೆ ಬೋರ್ಡ್ ಅಧಿಕಾರಿಗಳನ್ನು ಮತ್ತುಲೋಕಸಭಾ ಸದಸ್ಯರು ಮತ್ತು ಮಂತ್ರಿಗಳನ್ನು ಭೇಟಿ ಮಾಡಿ ಈ ರೈಲುಗಳನ್ನು ಬಳ್ಳಾರಿವರೆಗೆ ವಿಸ್ತರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಬಳ್ಳಾರಿ ರೈಲ್ವೆ ಪ್ರದೇಶ ನೈರುತ್ಯ ರೈಲ್ವೆ ವಲಯಕ್ಕೆ ಅತ್ಯಂತ ಹೆಚ್ಚಿನ ಆದಾಯವನ್ನು ನೀಡುತ್ತಿರುವ ಪ್ರದೇಶವಾಗಿದ್ದು ಈ ರೈಲು ಮಾರ್ಗ ಕೇವಲ ಗೂಡ್ಸ್ ರೈಲುಗಳಿಗೆ ಸೀಮಿತಗೊಳಿಸಿ ಗೂಡ್ಸ್ ರೈಲುಗಳ ಓಡಾಟಕ್ಕೆ ಆದ್ಯತೆ ನೀಡಿ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಅನ್ಯಾಯವನ್ನು ಮಾಡುತ್ತಿದೆ ಎಂಬುದಕ್ಕೆ ಎರಡು ರೈಲುಗಳು ಬಳ್ಳಾರಿವರೆಗೆ ವಿಸ್ತರಣೆ ಆಗದಿರುವುದೇ ಸಾಕ್ಷಿಯಾಗಿದೆಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಲು ನವದೆಹಲಿಯಲ್ಲಿರುವ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ ದೇವೇಂದ್ರಪ್ಪನವರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು ಅವರು ರೈಲ್ವೆ ಮಂತ್ರಿಗಳಲ್ಲಿ ವಿಷಯವನ್ನು ಪ್ರಾಸ್ತಾಪಿಸುವುದಾಗಿ ವಾಗ್ದಾನ ಮಾಡಿರುತ್ತಾರೆ ಹಾಗೂ ಆದಷ್ಟು ಬೇಗ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿ ಮಾಡಲು ನಿಯೋಗ ತೆಗೆದುಕೊಂಡು ಹೋಗುವುದಾಗಿ ಕೂಡ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles