ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಎಸ್ ಡಿ ಪಿ ಐ ವತಿಯಿಂದ ಮನವಿ ಸಲ್ಲಿಸಲಾಯಿತು.
ಎಸ್ ಡಿ ಪಿ ಐ ಪಕ್ಷದ ರಾಜ್ಯ ನಾಯಕರಾದ ಝಾಕೀರ್ ಅವರು ಮಾತನಾಡಿ ಮುಂಬೈ ರೈಲಿನಲ್ಲಿ ಆರ್ ಪಿ ಎಫ್ ಯೋಧ ನಡೆಸಿದ ಬರ್ಬರ ಹತ್ಯೆ ಖಂಡಿಸಿ , ಹರ್ಯಾಣದ ಮುಸ್ಲಿಂರ ಮೇಲೆ ಹತ್ಯೆ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ನಡೆಸುತ್ತಿರುವ ಹಿಂಸಾಚಾರ, ಸಂಘ ಪರಿವಾರದ ದುಷ್ಕರ್ಮಿಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹೈದರ್ ಅಲಿ, ಉಪಾಧ್ಯಕ್ಷರಾದ ಇನಾಯತ್, ಪ್ರಧಾನ ಕಾರ್ಯದರ್ಶಿಗಳಾದ ಅಬೂಬಕರ್ ಸೇರಿದಂತೆ ಮತ್ತಿತರ ಇದ್ದರು.