ಬೆಳಗಾಯಿತು ವಾರ್ತೆ
ಬಳ್ಳಾರಿ: ಕರಾಟೆ ಎನ್ನುವುದು ಕೇವಲ ಒಂದು ಸ್ಪರ್ಧೆ ಅಲ್ಲ ಅದು ಒಂದು ದೊಡ್ಡ ಶಕ್ತಿ ಎಂದು ಚೈತನ್ಯ ಸಮೂಹ ಸಂಸ್ಥಯ ಅಧ್ಯಕ್ಷ ಡಾ. ರಾಧಾಕೃಷ್ಣ ಪಯ್ಯವುಲ ಅವರು ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ, 4ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯ ಉದ್ಘಾಟಕರಾಗಿ ಅವರು ಮಾತನಾಡಿದರು.
ಮೃತ್ಯುಂಜಯ ಸ್ವಾಮೀ ಅವರು ಈ ಒಂದು ಸ್ಪರ್ಧೆಯನ್ನು ಆಯೋಜನೆ ಮಾಡಿ ಬಳ್ಳಾರಿಯ ಮಕ್ಕಳಿಗೆ ಅನುಕೂಲ ಮಾಡಿದ್ದಾರೆ. ಇವರ ಶ್ರಮ ಬಹಳ ಇದೆ. ಇವರು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಮಾಡಲಿ ಎಂದ ಅವರು, ಕರಾಟೆ ಒಂದು ಸ್ಪರ್ಧೆ ಅಲ್ಲ ಅದು ನಮ್ಮ ಆತ್ಮ ಶಕ್ತಿಯನ್ನು ಹೆಚ್ಚಿಸುವ ಒಂದು ಕ್ರೀಡೆ. ಕರಾಟೆ ಕಲಿಯುವುದರಿಂದ ನಮ್ಮ ದೇಶದಲ್ಲಿ ಬದಲಾವಣೆ ಆಗುವುದರ ಜೋತೆಗೆ ಏಕಾಗ್ರತೆ ಮತ್ತು ಬುದ್ದಿಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಉದ್ದಿಮೆದಾರ ಡಿ.ಎಲ್ ರಮೇಶ್ ಅವರು, ಬಳ್ಳಾರಿಯಲ್ಲಿ ಕರಾಟೆ ಸ್ಪರ್ಧೆಯನ್ನು ಬಹು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಬಳ್ಳಾರಿಯ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೋತೆಗೆ ಕರಾಟೆಯನ್ನು ಕಲಿಸಿ ಇದರಿಂದ ಮಕ್ಕಳ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದರು. ನಂತರ ಜೆ.ಕೆ ಶ್ರೀನಿವಾಸ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಡಿ ಎಲ್ ರಮೇಶ್, ಚಂದ್ರು ಡವಲಪರ್ ಕಂಪನಿಯ ಮಾಲೀಕರಾದ ಚಂದ್ರು,ಉದ್ದಿಮೆದಾರ ಗಾಜಲು ಶ್ರೀನಿವಾಸಲು, ಜೆ.ಕೆ ಶ್ರೀನಿವಾಸ್, ವಿಕ್ರಮ ಮಲ್ಲಿಕಾರ್ಜುನ, ಗಡ್ಡಂ ತಿಮ್ಮಪ್ಪ, ಕಟ್ಟೆ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.