ಬಳ್ಳಾರಿ: ಡಿ.2ಮತ್ತು 3ರಿಂದ ನಗರದ ವಾಲ್ಮೀಕಿ ಭವನದಲ್ಲಿ ಎರಡು ದಿನಗಳ ಕಾಲ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನಿಂದ ನಾಲ್ಕನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಬಂದ್ರಾಳು ಎಂ ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲ್ಕನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಅವರು ಉದ್ಘಾಟಿಸಲಿದ್ದು ನಗರ ಶಾಸಕ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ನಾಡಿನ ವಿವಿಧ ರಾಜ್ಯಗಳಿಂದ ಬಂದಿರುವ 15 ವರ್ಷದೊಳಗಿನ ಮಕ್ಕಳಿಗೆ ನಾಳೆ ಸ್ಪರ್ಧೆ ನಡೆಯಲಿದೆ. ಕರ್ನಾಟಕ ಕರಾಟೆ ರತ್ನ ಪ್ರಶಸ್ತಿಯನ್ನು ಹನ್ನಿ ಆನ್ನಪ್ಪ ಮಾರ್ಕಲ್ ಅವರಿಗೆ ನೀಡಿ ಗೌರವಿಸಲಿದೆ ಅಲ್ಲದೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಯಲಿದೆ. ಡಿಸೆಂ ಬರ್ 3ರಂದು ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಡಾ. ಮಹಿಪಾಲ, ಗುರುಲಿಂಗನಗೌಡ, ರಾಮಲಿಂಗಪ್ಪ, ಗುತ್ತಿಗೆ ನೂರು ವಿರುಪಾಕ್ಷಗೌಡ, ದೂತ್ಕರ್ ಶ್ರೀನಿವಾಸ್, ಪಾಲಣ್ಣ, ಮುರಹರಿ ಗೌಡ, ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಟ್ರಸ್ಟ್ನ್ ಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಚಾನಾಳ್ ಶೇಖರ್, ಜಿಲ್ಲಾಧ್ಯಕ್ಷರು ಅ.ಭಾ.ವೀ.ಲಿಂ.ಮಹಾಸಭಾ, ಬಳ್ಳಾರಿ, ಶಬರಿ ರವಿಚಂದ್ರನ್, ವಿಕ್ರಮ ಮಹಿಪಾಲ್, ಗಡ್ಡಂ ತಿಮ್ಮಪ್ಪ, ಯಾಳ್ಪಿ ದಿವಾಕರ್, ಶಿವಾನಂದ ರೆಹಮಾತ್‌ನಾಳ್, ಗೌರಿಶಂಕರ್‌ಸ್ವಾಮಿ, ಹೆಚ್.ಎಂ.ಕಿರಣ್, ಹೆಚ್.ಎಂ.ಅಮರೇಶ್, ದಮ್ಮೂರು ರವಿಕುಮಾರ್, ಮುಂತಾದವರು ಉಪಸ್ಥಿತರಿದ್ದರು





