ಬೆಳಗಾಯಿತು ವಾರ್ತೆ |Www.belagayithu.in
ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ಎರಡು ನದಿಗಳಲ್ಲಿ ನೀರಿನ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಪರಿಣಾಮ ತುಂಗಭದ್ರಾ ಅಣೆಕಟ್ಟು ಭರ್ತಿಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಬರುವ ಪ್ರಯುಕ್ತ ಎಂದಿನಂತೆ ಸರ್ಕಾರ ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಜಲಾನಯನ ಪ್ರದೇಶಗಳ ನಿವಾಸಿಗಳಿಗೆ ಮಹತ್ವದ ಸೂಚನೆ ನೀಡಿದೆ. ಎರಡು ವಾರಗಳಿಂದ ಉತ್ತರ ಕರ್ನಾಟಕ, ಪಶ್ಚಿಮ ಘಟ್ಟಗಳಲ್ಲಿ ಅತ್ಯಧಿಕ ಭಾರೀ ಮಳೆ ಆಗುತ್ತಿದೆ. ಇದೀಗ ‘ಡಾನಾ ಚಂಡಮಾರುತ’ದ ಪ್ರಭಾವ (Cyclone Dana) ಸಹ ಇದೆ. ಹೀಗಾಗಿ ಇನ್ನಷ್ಟು ದಿವಸಗಳ ಕಾಲ ಮಳೆ ಬರುವ ಮುನ್ಸೂಚನ ಇದೆ. ಹೀಗಾಗಿ ಭರ್ತಿಯಾಗಿರುವ ಬನವಾಸಿ ಸಮೀಪದ ವಾರದ ಮೂಲದಿಂದ ಹುಟ್ಟುವ ವರದಾ ನದಿ, ತುಂಗಾ ಹಾಗೂ ಭದ್ರಾನದಿಗಳ ಒಳಹರಿವು ಹೆಚ್ಚಾಗಿ ತುಂಗಭದ್ರಾ ಅಣೆಕಟ್ಟು ತುಂಬಿಕೊಂಡಿದೆ. ಇದೀಗ ಈ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನು ಮಂಗಳವಾರ ಸಂಜೆವರೆಗೆ ಬಿಡುಗಡೆ ಮಾಡಲಾಗುತ್ತದೆ.
ಸದರಿ ಕಾರಣದಿಂದ ಅಣೆಕಟ್ಟಿನ ಕೆಳಗಭಾಗ ಜನರು ಹಾಗೂ ತುಂಗಭದ್ರಾ ನದಿಯ ಕೆಳ ಭಾಗದ ನಿವಾಸಿಗಳಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ (KSNDMC) ಪ್ರವಾಹದ ಎಚ್ಚರಿಕೆ ನೀಡಿದೆ. ಸುರಕ್ಷತ ಸ್ಥಳದಲ್ಲಿರುವಂತೆ ಮನವಿ ಮಾಡಿಕೊಂಡಿದೆ.