ಬೆಳಗಾಯಿತು ವಾರ್ತೆ | www.belagayithu.in
ಶಿರಾ: ತಾಲ್ಲೂಕಿನ ಬರಗೂರು ಸಮೀಪದ ಬರಗೂರು– ದಾಸರಹಳ್ಳಿ ರಸ್ತೆಯಲ್ಲಿ ಶುಕ್ರವಾರ ಕೆಎಸ್ಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಬೈಕ್ ನಲ್ಲಿದ್ದ ಬರಗೂರು ಗ್ರಾಮದ ಮೂರ್ತಿ (25) ಮೃತರು. ಮತ್ತೊಬ್ಬರ ವಿವರ ತಿಳಿದು ಬಂದಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಮುಖಾಮುಖಿಯಾಗಿ ಅವಘಡ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





