23.5 C
Bellary
Friday, September 29, 2023

Localpin

spot_img

ಬಳ್ಳಾರಿ ನಗರಕ್ಕೆ ಐದು ಜನ ಶಾಸಕರಿದ್ದಾರೆ


ಬೆಳಗಾಯಿತು ವಾರ್ತೆ
ಬಳ್ಳಾರಿ:ಬಳ್ಳಾರಿ ನಗರಕ್ಕೆ ಐದು ಜನ ಶಾಸಕರಿದ್ದಾರೆ ಎಂದು ಕೆಆರ್ ಪಿಪಿ ಪಕ್ಷದ ಮುಖಂಡ ಹಾಗೂ ಮಾಜಿ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಹೇಳಿದರು.

ನಗರದ ಜನಾರ್ಧನ ರೆಡ್ಡಿ ಅವರ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಳ್ಳಾರಿ ನಗರಕ್ಕೆ ಭರತ್ ರೆಡ್ಡಿ, ಸೂರ್ಯ ನಾರಾಯಣ ರೆಡ್ಡಿ, ಪ್ರತಾಪ್ ರೆಡ್ಡಿ, ಶರತ್ ರೆಡ್ಡಿ, ಚಾನಳ್ ಶೇಖರ್ ಹೀಗೆ ಐದು ಜನ ಶಾಸಕರಿದ್ದು ಅಧಿಕಾರಿಗಳಿಗೆ ಇದರಿಂದ ಕೆಲಸ ಮಾಡುವುದಕ್ಕೆ ಕಷ್ಟವಾಗಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದರು. ಕಲ್ಯಾಣ ಕರ್ನಾಟಕ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಕುರಿತು ಹಗುರವಾಗಿ ಮಾತನಾಡುವುದನ್ನು ಗಂಭೀರವಾಗಿ ಖಂಡಿಸುತ್ತೇವೆ ಎಂದರು.

ನಿಮ್ಮ ಜೊತೆಗೆ ಗ್ರಾನೈಟ್ ಬಿಜಿನೆಸ್ ಮಾಡುತ್ತಿದ್ದ ದೇವ ರೆಡ್ಡಿ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಲಿ ಒತ್ತಾಯಿಸಿ ಅವರು ದೇವರೆಡ್ಡಿ ಕುಟುಂಬಸ್ಥರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಶಾಸಕರಾಗಿ ಒಂದು ತಿಂಗಳ ನಂತರ ಬಿ ರಿಪೋರ್ಟ್ ಹಾಕಿದ್ದಾರೆ. ಸಿಪಿಐ ಅವರು ವರ್ಗಾವಣೆ ಆಗದೆ ಅದೇ ಠಾಣೆಯಲ್ಲಿ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್, ಸಿಪಿಐ ವರ್ಗಾವಣೆಗೆ ಆದರೂ ಇವರು ಮಾತ್ರ ಆಗಿಲ್ಲ, ದೇವರೆಡ್ಡಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ನಮ್ಮ ಪಕ್ಷ ಮಾಡುತ್ತದೆ ಎಂದರು.

ನಗರ ಶಾಸಕ ಭರತ್ ರೆಡ್ಡಿ ಅವರಿಗೆ ತಾಕತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ ನೀನು ನಿನ್ನ ತಂದೆಯ ಫೋಟೋ ಇಟ್ಟುಕೊಂಡು ಸ್ಪರ್ಧೆಗೆ ನಿಲ್ಲುತ್ತೇಯೋ ಅಥವಾ ಇನ್ಯಾರದೋ ಫೋಟೋ ಇಟ್ಟುಕೊಂಡು ನಿಲ್ಲುತ್ತೇಯೋ ನನಗೆ ಗೊತ್ತಿಲ್ಲಾ ನಾನು ಜನಾರ್ಧನ ರೆಡ್ಡಿ ಅವರ ಫೋಟೋ ಇಟ್ಟುಕೊಂಡು ಸ್ಪರ್ಧೆಗೆ ನಿಲ್ಲುತ್ತೇನೆ ನೀನು ಸ್ವತಂತ್ರವಾಗಿ ನಿಲ್ಲುವಂತೆ ಸವಾಲು ಹಾಕಿದರು.

ಕೆಆರ್‌ಪಿಪಿ ಪಕ್ಷದ ಮುಖಂಡ ಆಲಿಖಾನ್ ಅವರು ಮಾತನಾಡಿ ಶಾಸಕ ನಾರಾ ಭರತ್ ರೆಡ್ಡಿಗೆ ಗಾಂಜಾ ಗಿರಾಕಿ ಎಂದು ನಾಮಕರಣ ಮಾಡುತ್ತಿದ್ದೇವೆ ಅವರನ್ನು ನಾವು ಗಾಂಜಾ ಶಾಸಕ ಎಂದೇ ಕರೆಯುತ್ತೇವೆ ದಿನದ ಇಪ್ಪತ್ತನಾಲ್ಕು ತಾಸು ಯಾವಾಗಲೂ ಗಾಂಜಾ ಸೇವನೆ ಮಾಡಿದವರ ರೀತಿಯಲ್ಲಿ ಇರುತ್ತಾರೆ ಎಂದರು
ಚುನಾವಣೆ ಸಂದರ್ಭದಲ್ಲಿ ಕಳ್ಳತನ ಮಾಡಿದವರು ಜೈಲಿನಲ್ಲಿ ಇರಬೇಕಾ ಅಥವಾ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇರಬೇಕಾ ಎಂದು ಹೇಳಿದ ಅವರು ನಿಮ್ಮ ಅತ್ತೆ ರಾಣಿ ಸಂಯುಕ್ತ ಅವರು ಸಹ ಜೈಲು ಸೇರಿದ ಬಗ್ಗೆ ಹಾಗೂ ನಮ್ಮ ಅಣ್ಣಾ ಎಂದು ಕರೆಯುವ ಜಿಲ್ಲಾ ಉಸ್ತುವಾರಿ ಸಚಿವರಾದ ನಾಗೇಂದ್ರ ಅವರನ್ನು ಏಕೆ ಕೇಳಲಿಲ್ಲ ಎಂದರು.
ಜನಾರ್ಧನ ರೆಡ್ಡಿ ಅವರು ಭ್ರಮೆಯಲ್ಲಿ ಇದ್ದಾರೆ ಎಂದು ಸಚಿವ ನಾಗೇಂದ್ರ ಅವರು ಹೇಳುತ್ತಿದ್ದಾರೆ ಕೆಆರ್ ಪಿಪಿ ಪಕ್ಷದ ಮೆಹಬೂಬ್ ಭಾಷಾ ಎಂಬ ಕಾರ್ಯಕರ್ತನನ್ನು ಕೊಲೆ ಮಾಡಿದ ಕೋಳಿ ಭಾಷಾ ಜಿಲ್ಲಾ ಉಸ್ತುವಾರಿ ಸಚಿವರು ಜೊತೆಗೆ ಇದ್ದಾರೆ ಎಂದು ಫೋಟೋ ತೋರಿಸಿದರು.
ಈ ಸಂದರ್ಭದಲ್ಲಿ ದುರಪ್ಪ ನಾಯಕ, ಸಂಜಯ್ ಬೆಟಗೇರಿ,ಮಲ್ಲಿಕಾರ್ಜುನ ಆಚಾರಿ, ಕೊಳಗಲ್ಲು ಅಂಜಿ ಸೇರಿದಂತೆ ಮತ್ತಿತರ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,874FollowersFollow
0SubscribersSubscribe
- Advertisement -spot_img

Latest Articles