ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ. ಕ್ರಮೇಣವಾಗಿ ಕನ್ನಡ ಭಾಷೆ ಮರಿಚಿಕೆಯಾಗುತ್ತಿದ್ದು, ಇಂಗ್ಲಿಷ, ತಮಿಳು, ತೆಲಗು ಭಾಷೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ.
ಹೌದು ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ಕನ್ನಡಕ್ಕೆ ಗೌರವ ಸೂಚಿಸಿ ಉಳಿದ ದಿನಗಳಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತೆ ಮಾಡಲಾಗುತ್ತಿದೆ. ನಗರದ ಹಲವಾರು ಅಂಗಡಿಗಳ ಮೇಲೆ ಕನ್ನಡ ನಾಮ ಫಲಕ ಹಾಕದೆ, ಆಂಗ್ಲ, ತೆಲಗು, ಹಿಂದಿ ಭಾಷೆಯಲ್ಲಿ ನಾಮ ಫಲಕ ಹಾಕಿ ಕನ್ನಡ ಭಾಷೆಗೆ ದ್ರೋಹ ಬಗೆಯುವ ಕೆಲಸವಾಗುತ್ತಿದೆ ಎಂದು ಕರ್ನಾಟಕ ಜನ ಸೈನ್ಯ ಆರೋಪ ಮಾಡುತ್ತಿದೆ.
ಈ ಕುರಿತು ಮಾತನಾಡಿದ ಕರ್ನಾಟಕ ಜನಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ರ‍್ರಿಸ್ವಾಮಿ ಅವರು, ನಗರದಲ್ಲಿನ ಎಲ್ಲಾ ವ್ಯಾಪಾರ ವಹಿವಾಟು ಮತ್ತು ಸಂಘ ಸಂಸ್ಥೆಗಳು ತಮ್ಮ ನಾಮ ಫಲಕದಲ್ಲಿ ಕನ್ನಡವನ್ನು ಕಡೆಗೆಣಿಸಿ ಬೇರೆ ಭಾಷೆಗಳಿಗೆ ಹೆಚ್ಚಿನ ಆಧ್ಯತೆ ನೀಡುತಿದ್ದಾರೆ. ಕರ್ನಾಟಕದಲ್ಲಿ ಇದ್ದು, ನಾವೇ ನಮ್ಮ ಭಾಷೆಯ ಕಗ್ಗೂಲೆ ಮಾಡಿದರೆ ನಮ್ಮ ಭಾಷೆಯ ರಕ್ಷಣೆ ಯಾರು ಮಾಡುತ್ತಾರೆ ಎಂದರು.
ಅಂಗಡಿ ಮುಂಗಟ್ಟು ಗಳ ಮೇಲೆ ಕನ್ನಡ ಭಾಷೆ ಮರಿಚಿಕೆ ಆಗಿರುವ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ನಮಗೆ ಇಲ್ಲಿಯ ವರೆಗೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಸಂಬAಧಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಮುಂದಿನ ಜನವರಿ ತಿಂಗಳ ಒಳಗಾಗಿ ನಗರದ ಎಲ್ಲಾ ಅಂಗಡಿ ಮುಂಗಟ್ಟು ಮತ್ತು ಸಂಘ ಸಂಸ್ಥೆಗಳ ನಾಮ ಫಲಕದಲ್ಲಿ ಕನ್ನಡ ಕಡ್ಡಾಯ ಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಂತರ ಈ ಕುರಿತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಕನ್ನಡ ಭಾಷೆಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದರು.
ಒಟ್ಟಿನಲ್ಲಿ ಬಳ್ಳಾರಿ ಆಂಧ್ರಗಡಿಗೆ ಹೊಂದಿಕೊAಡಿರುವುದರಿAದ ಇಲ್ಲಿ ಅತಿ ಹೆಚ್ಚು ತೆಲಗು ಭಾಷೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಬಳ್ಳಾರಿಯಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ನೀರ್ಮಾಣವಾದರೂ ಆಶ್ಚರ್ಯವಿಲ್ಲ.