ಬೆಳಗಾಯಿತು ವಾರ್ತೆ |www.bealagayithu.in
ಕೊಪ್ಪಳ : : ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ ನೂತನ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಆಡಳಿತ ಮಂಡಳಿ ಆದೇಶದ ಮೇರೆಗೆ ಹಿರಿಯ ಶಿಕ್ಷಕರಾದ ಅಮರೇಶ ಆದಪ್ಪ ಕರಡಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲಿನ ವೆಂಕಟೇಶ್ ಬಂಡಿ ವಡ್ಡರ ಇವರು ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಕುಕನೂರಿನ ಮುಖ್ಯೋಪಾಧ್ಯಾಯರಾಗಿದ್ದಾರೆ.
ಅಮರೇಶ ಅದಪ್ಪ ಕರಡಿ ಇವರಿಗೆ ಪೂಜ್ಯಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದ್ದಾರೆ. ಇವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಭೆಯಲ್ಲಿ ನಿವೃತ್ತ ಶಿಕ್ಷಕರಾದ ಎಸ್ಎಂ. ಕಂಬಾಳಿಮಠ. ಹಿರಿಯ ಶಿಕ್ಷಕರಾದ ಶ್ರೀ ಎಂ ಎನ್ ಕಮ್ಮಾರ್, ಎಸ್ ಗುಂಡನಗೌಡ್ರು, ಆರ್ ಬಿ ಬಾಳನ್ಗೌಡ್ರು, ವಿ ಜೆ ಹಿರೇಮಠ್, ಮರಿ ಶಾಂತವೀರ ಶೆಟ್ಟರ್, ರವಿ ರಂಜಣಗಿ, ಶ್ರೀನಿವಾಸ್ ವೀರಾಪುರ್ , ನಾಗರಾಜ್ ಬಹದ್ದೂರ್ ಬಂಡಿ, ಕವಿತಾ, ಮನು, ಎಸ್ ಪಿ ರೆಡ್ಡಿಯರ್ ಇನ್ನಿತರ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು. ಅಲ್ಲದೇ ಆಡಳಿತ ಮಂಡಳಿಯ ಸದಸ್ಯರು , ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶುಭಾಶಯಗಳನ್ನು ಸಲ್ಲಿಸಿದ್ದಾರೆ.





