ಬಳ್ಳಾರಿ ರೆಡ್ಡಿ ನೌಕರರಿಂದ ಕಾರ್ಯಕ್ರಮ

ಬೆಳಗಾಯಿತು ವಾರ್ತೆ |www.bealagayithu.in
ಬಳ್ಳಾರಿ: ಹೇಮ ವೇಮ ರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬಳ್ಳಾರಿ,ಇವರ ವತಿಯಿಂದ ಬಲಿಜ ಕಲ್ಯಾಣ ಮಂಟಪ, ಬಾಲಜಿ ರಾವ್ ರಸ್ತೆ, ವಡ್ಡರ ಬಂಡೆಯಲ್ಲಿ ಉದ್ಘಾಟನಾ ಸಮಾರಂಭವನ್ನು ದಿ.10 ಬುಧವಾರದಂದು ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ರೆಡ್ಡಿ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ರೆಡ್ಡಿ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಶ್ರೀ ವೇಮನಾನಂದ ಮಹಾಸ್ವಾಮಿಗಳು ಮಹಾಯೋಗಿ ವೇಮನ ಸಂಸ್ಥಾನ ಮಠ ರೆಡ್ಡಿ ಗುರು ಪೀಠ, ಅಧ್ಯಕ್ಷತೆಯನ್ನು ಗಣಪಾಲ ಐನಾಥರರೆಡ್ಡಿ ಸಂಸ್ಥಾಪಕ ನಿರ್ದೇಶಕರು ಹೇಮ ವೇಮ ರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ , ಬಳ್ಳಾರಿ ಹಾಗೂ ನಿರ್ದೇಶಕರು ಕರ್ನಾಟಕ ರೆಡ್ಡಿ ಜನಸಂಘ, ಬೆಂಗಳೂರು.ಇವರು ವಹಿಸಲಿದ್ದಾರೆ.
ಎಚ್,ಕೆ, ಪಾಟೀಲ್ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ರಾಮಲಿಂಗರೆಡ್ಡಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು, ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ.
ಕಾರ್ಯಕ್ರಮದ ಗೌರವ ಉಪಸ್ಥಿತಿರಾಗಿ ನಾರ ಭರತ್ ರೆಡ್ಡಿ ಶಾಸಕರು, ಬಳ್ಳಾರಿ ನಗರ, ಜಿ. ಸೋಮಶೇಖರ ರೆಡ್ಡಿ ಮಾಜಿ ಶಾಸಕರು, ಬಳ್ಳಾರಿ ನಗರ ಹಾಗೂ ಗೌರವ ಅಧ್ಯಕ್ಷರು ಬಳ್ಳಾರಿ ರೆಡ್ಡಿ ಜನಸಂಘ, ಬಳ್ಳಾರಿ ಜಿ. ಲಕ್ಷ್ಮೀ ಅರುಣಾ ಜರ್ನಾದನ ರೆಡ್ಡಿ, ಭಾಗವಹಿಸಲಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles