34.5 C
Bellary
Wednesday, May 15, 2024

Localpin

spot_img

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಬೆಳಗಾಯಿತು ವಾರ್ತೆ / https://belagayithu.in

ಬಳ್ಳಾರಿ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಇಡೇರಿಕೆಗೆ ಆಗ್ರಹಿಸಿ ಇದೇ ತಿಂಗಳು ಫೆ. 13,14ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಧಾನ ಸೌಧ ಚಲೋ ಎಂಬ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಎ. ದೇವದಾಸ್ ಅವರು ಹೇಳಿದರು. ನಗರದ ಮರ್ಚೆಡ್ ಹೋಟೆಲ್ ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ಹೆಚ್ಚು ಮಾಡುವುದಾಗಿ ಹೇಳಿ ನಂಬಿಸಿ ಮೋಸ ಅನ್ಯಾಯ ಮಾಡಿದರು. ಅದೆ ರೀತಿ ಇಂದಿನ ಸರ್ಕಾರವು ಅವರದ್ದೆ ಹಾದಿ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು. ಆಶಾ ಕಾರ್ಯಕರ್ತೆಯರು ತಮಗೆ ಎಷ್ಟೇ ಒತ್ತಡ ಇದ್ದರು, ತಮ್ಮ ಕೆಲಸದ ನಡುವೆಯೂ ಸರ್ಕಾರಕ್ಕೆ ಕೆಲಸ ಮಾಡುತ್ತಾರೆ. ಆದರೆ ಅವರಿಗೆ ನೀಡುವ ಮೊತ್ತ ಕೇವಲ 5 ಸಾವಿರ ಮಾತ್ರ. ಹೀಗಾದರೆ ಅವರ ಜೀವನ ನಿರ್ವಹಣೆ ಹೇಗಾಗುತ್ತದೆ. ರಾತ್ರಿ 12 ಗಂಟೆಯಾದರೂ ಗರ್ಭಿಣಿ ಹೆಣ್ಣಿನ ಜೊತೆ ನಿಲ್ಲುತ್ತಾರೆ. ಕೋವಿಡ್ ಸಂದರ್ಭದಲ್ಲಿಯೂ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಆದರೆ, ಅವರ ಬಗ್ಗೆ ಸರ್ಕಾರಕ್ಕೆ ಮಾನವೀಯತೆ ಇಲ್ಲ ಎಂದು ಆರೋಪ ಮಾಡಿದರು. ಜಿಲ್ಲಾ ಗೌರವ ಅಧಕ್ಷ್ಯ ಎ. ಶಾಂತಾ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಮಕ್ಕ, ರೇಷ್ಮಾ, ಪಶಿನಾ ಹಾಜರಿದ್ದರು.
ಬೇಡಿಕೆಗಳು:

  • ಆರ್ ಸಿ ಹೆಚ್ ಪೋರ್ಟಲ್ ನ್ನು ಡೀಲಿಂಕ್ ಮಾಡಬೇಕು.
  • ಕನಿಷ್ಠ 15 ಸಾವಿರ ಪ್ರೋತ್ಸಾಹ ಧನ ನೀಡಬೇಕು.
  • ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳಬಾರದು.
  • ಆಶಾ ಕಾರ್ಯಕರ್ತೆಯರನ್ನ ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ,ಪಿಎಫ್, ಇಎಸ್ಐ ಸೌಲಭ್ಯ ನೀಡಬೇಕು.
  • ಸಮವಸ್ತ್ರ ಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು.
  • ಆಶಾ ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಬೇಕು

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles