ಬೆಳಗಾಯಿತು ವಾರ್ತೆ | Www.belagayithu.in
ವಿಜಯನಗರ: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ಗೇಟ್ ಅಳವಡಿಕೆಗೆ ಪೂಜೆ ನೆರವೇರಿಸುವ ಮೂಲಕ ಟಿಬಿಬಿ (ತುಂಗಭದ್ರಾ ಮಂಡಳಿ) ಕೆಲಸ ಆರಂಭಿಸಿದೆ. ಕಳೆದ ಒಂದೂವರೆ ವರ್ಷದ ನಂತರ ಗೇಟ್ ಅಳವಡಿಕೆಗೆ ಗುಜರಾತ್ ಅಹಮದಾಬಾದ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಅಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿ ಕೆಲಸ ಆರಂಭ ಮಾಡಲು ಎಲ್ಲ ಸಿದ್ಧತೆ ನಡೆಸಿದೆ. ಎಸ್ಇ ನಾರಾಯಣ ನಾಯ್ಕ ನೇತೃತ್ವದಲ್ಲಿ ಪೂಜಾಕಾರ್ಯ ನಡೆಯಿತು.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ಮಾತನಾಡಿ, “ಅಂದಾಜು 52 ಕೋಟಿ ವೆಚ್ಚದಲ್ಲಿ 33 ಕ್ರೆಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಪೂಜೆ ನೆರವೇರಿಸಲಾಗಿದೆ. ತಿಂಗಳಿಗೆ 8 ಗೇಟ್ ಅಳವಡಿಕೆಗೆ ಗುತ್ತಿಗೆ ಕಂಪನಿ ಗುರಿ ಹೊಂದಿದೆ. 5 ತಂಡಗಳು ಕಾರ್ಯ ನಿರ್ವಹಿಸಲಿವೆ. ಮುಂದಿನ ಏಪ್ರಿಲ್ ತಿಂಗಳಿಗೆ ಎಲ್ಲ ಗೇಟ್ ಅಳವಡಿಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಇದೇ ತಿಂಗಳು 20 ರಂದು 18ನೇ ಗೇಟ್ ತೆರೆವು ಕಾರ್ಯ ನಡೆಯಲಿದೆ. ನಂತರ ಪ್ರಾಯೋಗಿಕ ಗೇಟ್ ಅಳವಡಿಕೆಗೆ ನಡೆಯಲಿದೆ. ಯಶಸ್ಸು ಕಂಡ ನಂತರ ಸರಳವಾಗಿ ಎಲ್ಲ ಗೇಟ್ ಅಳವಡಿಕೆಗೆ ಅನುಕೂಲ ಆಗಲಿದೆ” ಎಂದರು.





