ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ಸಮೀಪದ ಚಿಲಕನಹಟ್ಟಿ ಗ್ರಾಮದ ಮಾರುತಿನಗರದ ಮದಾರರು ಮತಗಟ್ಟೆಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ.ಹಲವು ವರ್ಷಗಳಿಂದ ಪ್ರತ್ಯೆಕ ಮತಗಟ್ಟೆಗೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿಸಲ್ಲಸಿದ್ದರೂ,ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಗ್ರಾಮದಮತದಾರರು ಬಹಿಷ್ಕರಿಸಿದ್ದಾರೆ.
ಚಿಲಕನಹಟ್ಟಿ ಗ್ರಾಮದ ಮಾರುತಿನಗರದಲ್ಲಿ ಸುಮಾರು 1200 ಜನಸಂಖ್ಯೆಹೊಂದಿದ್ದು, 400ಮತದಾರರಿದ್ದು, ಇವರು ಸಮೀಪದ 3ಕಿ.ಮೀದೂರದ ಹಾರುವನಹಳ್ಳಿಗ್ರಾಮದ ಮತಗಟ್ಟೆಸಂಖ್ಯೆ 78ರಲ್ಲಿ ಮಚಲಾಯಿಸಬೇಕಿದ್ದು. ರಾಷ್ಟ್ರೀಯಹೆದ್ದಾರಿ-50 ಅನ್ನು ಗ್ರಾಮಸ್ಥರು ದಾಟಿಕೊಂಡು ಹೋಗಬೇಕಿದೆ.ಅಲ್ಲದೆ ವಯೋವೃದ್ದರು, ಅಂಗವಿಕಲರು, ಮಹಿಳೆಯರು ರಾಷ್ಟ್ರೀಯಹೆದ್ದಾರಿ ದಾಟಿಕೊಂಡು ಹೋಗವುದರಿಂದ ಅಪಘಾತಗಳಾಗುವ ಸಂಭವ ಇರುವ ಹಿನ್ನೆಯಲ್ಲಿ, ಗ್ರಾಮಸ್ಥರು ಗ್ರಾಮದಲ್ಲೆ ಮತಗಟ್ಟೆ ಸ್ಥಾಪಿಸಲು ಅನೇಕಬಾರಿ ಮನವಿಮಾಡಿದ್ದರು ಈಡೇರಿಸದ ಕಾರಣ ಮತದಾನ ಬಹಿಷ್ಕರಿಸಿದ್ದಾರೆ.ಅಧಿಕಾರಿಗಳು ಮನವೊಲಿಕೆಯಲ್ಲಿ ತೊಡಗಿದ್ದಾರೆ.ಆದರೂ ಮತದಾರರು ಪಟ್ಟುಸಡಿಸದೆ,ಪ್ರತ್ಯೆಕ ಮತಗಟ್ಟೆಗೆ ಬಿಗಿಪಟ್ಟು ಹಿಡಿದಿದ್ದಾರೆ.ಹಾರುವನಹಳ್ಳಿ ಗ್ರಾಮದಲ್ಲಿರುವ ಮತಗಟ್ಟೆಗೆ ಮದಾರರು ಮತದಾನಕ್ಕೆ ತೆರಳದೆ ಬಿಗಿಪಟ್ಟು ಮುಂದುವರೆಸಿದ್ದಾರೆ.