36.2 C
Bellary
Saturday, April 27, 2024

Localpin

spot_img

ಯುವ ಪ್ರತಿಭೆಗಳ ಕಲಾಪ್ರದರ್ಶನ ಅನಾವರಣ

ಬಳ್ಳಾರಿ: ಕರ್ನಾಟಕ ರಾಜ್ಯದ ವೈವಿಧ್ಯಮಯ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಗಳಲ್ಲಿನ ಶ್ರೀಮಂತಿಕೆಯನ್ನು ಯುವಜನರಿಗೆ ಪರಿಚಯಿಸಲು ಮತ್ತು ಮೆಲುಕು ಹಾಕಲು ಬಳ್ಳಾರಿ ನಗರದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ರಾಜ್ಯ ಮಟ್ಟದ ಯುವಜೋತ್ಸವವು ಸಾಕ್ಷಿಯಾಯ್ತು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾತಂಡಗಳು, ಸ್ಪರ್ಧಾಳುಗಳು ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಪ್ರದರ್ಶಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳ ವೈಭವದ ಮೆರುಗು, ಹೊರಜಿಲ್ಲೆಗಳ ಕಲಾಪ್ರದರ್ಶನ ಸೇರಿದಂತೆ ಭರಪೂರ ಮನರಂಜನೆಯೊಂದಿಗೆ ತಮ್ಮ ಪ್ರತಿಭೆಗಳು ಅನಾವರಣಗೊಂಡವು.

ಬಳ್ಳಾರಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರದಂದು ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಂದ ಉದ್ಘಾಟನೆಗೊಂಡ ರಾಜ್ಯ ಮಟ್ಟದ ಯುವಜನೋತ್ಸವವು ವಿವಿಧ ಕಲಾ ವೈಭೋಗದ ಸಾಕ್ಷಿಯಾಗಿ ವೈವಿಧ್ಯತೆಯನ್ನು ಸಾರಿತು.
ವಾಲ್ಮೀಕಿ ಸಮುದಾಯ ಭವನದಲ್ಲಿ ಚಾಮರಾಜ ನಗರ-ಡೊಳ್ಳು ಕುಣಿತ, ಹಾವೇರಿ-ಗೊರವ, ಪೂಜಾ ಕುಣಿತ ವೀರಾಗಾಸೆ, ಮಂಡ್ಯ- ಜಾತ್ರೆ ಉತ್ಸವದ ನೃತ್ಯ ನವಿಲು ಕುಣಿತ, ಬೆಂಗಳೂರು ಗ್ರಾಮಾಂತರ- ಡೊಳ್ಳು ಕುಣಿತ, ಮೈಸೂರು – ಕಂಸಾಳೆ ನೃತ್ಯ, ರಾಮನಗರ- ಕರಗ, ದೇವಿ ಕುಣಿತ, ಉಡುಪಿ-ಕಂಗಿಲು ಕುಣಿತ ಸೇರಿದಂತೆ ನಾನಾ ಜಿಲ್ಲೆಗಳಿಂದ ಅಗಮಿಸಿದ್ದ ಸ್ಪರ್ಧಾರ್ಥಿಗಳು ತಮ್ಮ ಜನಪದ (ಗುಂಪು) ನೃತ್ಯ ಪ್ರದರ್ಶನ ನೀಡಿದರು.

ಅದರಂತೆ ಜನಪದ ಗೀತೆ ಗುಂಪು ಪ್ರದರ್ಶನ ಕಮ್ಮ ಭವನ, ವೈಯಕ್ತಿಕ ಜನಪದ ನೃತ್ಯವನ್ನು ಪಾರ್ವತಿ ಕಲ್ಯಾಣ ಮಂಟಪ, ಎಂಆರ್‍ಕೆ ಹಾಲ್‍ನಲ್ಲಿ ಗೀತ ಗಾಯನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ಕಥೆ ಬರೆಯುವ ಸ್ಪರ್ಧೆ, ಬಿಡಿಎಎ ಸಭಾಂಗಣದಲ್ಲಿ ಫೆÇೀಸ್ಟರ್ ರಚನೆ, ಭಾಷಣ ಸ್ಪರ್ಧೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಫೆÇೀಟೊಗ್ರಾಫಿ ಸ್ಪರ್ಧೆ ನಡೆದವು.
ವಿವಿಧ ವೇದಿಕೆಗಳಲ್ಲಿ ವಿವಿಧ ಜಿಲ್ಲೆಗಳ ಜಾನಪದ ನೃತ್ಯಗಳು ಗಮನ ಸೆಳೆದವು. ಸಾಂಸ್ಕøತಿಕ ಸಂಗೀತ, ಜಾನಪದ ಗೀತೆಗಳ ಸೊಗಡು ಯುವಜನೋತ್ಸವಕ್ಕೆ ಮೆರುಗು ತಂದಿತು. ಅಂತರ್ ಜಿಲ್ಲೆಯ ಕಲಾವಿದರು ಪೈಪೆÇೀಟಿಗೆ ಬಿದ್ದವರಂತೆ ತಮ್ಮ ಪ್ರಾಂತ್ಯದ ಕಲೆ, ಸಂಸ್ಕøತಿಯ ಸೊಗಡಿನ ಸಿಹಿ ಉಣಬಡಿಸಿದರು.
ಯುವಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕಲಾತಂಡಗಳು ನೃತ್ಯಕ್ಕೆ ಪೂರಕವಾದ ಪರಿಕರಗಳನ್ನು ಬಳಸಿ, ನುಡಿಸಿ ಗಮನ ಸೆಳೆದರು. ಕೊಳಲು, ತಬಲಾ, ತಮಟೆ, ಡೋಲು, ಮದ್ದಳೆ, ಢಮರು, ಮೃದಂಗ, ಹಾರ್ಮೋನಿಯಂ ಹೀಗೆ ಪ್ರತಿಯೊಂದು ವಾದ್ಯಗಳನ್ನು ಬಳಸಿದ್ದು ವಿಶೇಷವಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದ ಯುವಜನೋತ್ಸವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿತು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles