30.2 C
Bellary
Tuesday, May 7, 2024

Localpin

spot_img

ಈ ರಾಜ್ಯದಲ್ಲಿ 2 ಗಂಟೆ ಅಂತರದಲ್ಲಿ ಎರಡು ಭಾರಿ ಭೂಕಂಪ

ಬೆಳಗಾಯಿತು ವಾರ್ತೆ |www.belagayithu.in
ನವದೆಹಲಿ, ಮಾರ್ಚ್ 21: ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಅರುಣಾಚಲ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಏಕಕಾಲಕ್ಕೆ ಎರಡು ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಅರಣಾಚಲ ಪ್ರದೇಶದಲ್ಲಿ 3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪ ಬೆಳ್ಳಂಬೆಳಗ್ಗೆ 01:49 ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರವು ಅಕ್ಷಾಂಶ 27.38 ಮತ್ತು ರೇಖಾಂಶ 92.77 ರಲ್ಲಿ 10 ಕಿಲೋಮೀಟರ್ ಆಳದಲ್ಲಿದೆ. ಈ ಭೂಮಕಂಪವು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ ಸಂಭವಿಸಿತು ಎಂದು ವರದಿ ಆಗಿದೆ.
ಮೊದಲ ಭೂಕಂಪನದ ತೀವ್ರತೆ 3.7 ಕಂಡು ಬಂದಿದೆ. ಲ್ಯಾಟ್: 27.38 ಮತ್ತು ಉದ್ದ: 92.77 ಮತ್ತು 10 ಕಿಮೀ ಭೂಮಿ ಆಳದಲ್ಲಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ನಸುಕಿನ ಜಾವ ಎರಡನೇ ಭೂಕಂಪ ಮಧ್ಯರಾತ್ರಿ ಒಂದು ಭೂಕಂಪ ಸಂಭವಿಸಿದ ಕೇವಲ ಎರಡೇ ಗಂಟೆಗಳಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಅಂದರೆ ಬೆಳಗ್ಗೆ 03:40 ಗಂಟೆಗೆ 3.4ರ ತೀವ್ರತೆಯ ಭೂಕಂಪ ಜರಿಗಿದ್ದು, ಭೂಮಿ ನಡುಗಿದ ಅನುಭವ ಆಗಿದೆ. ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್‌ನಲ್ಲಿ ಈ ಎರಡನೇ ಭೂಕಂಪ ಜರುಗಿತು ಎಂದು ವರದಿ ಆಗಿದೆ.
ಈ ಭೂಕಂಪದ ಭೂಮಿಯ 5 ಕಿಲೋಮೀಟರ್ ಆಳದವರೆಗು ಕಂಡು ಬಂದಿದ್ದು, ಅಕ್ಷಾಂಶ 27.46 ಮತ್ತು ರೇಖಾಂಶ 92.82 ನಲ್ಲಿದೆ. ಈ ಎರಡು ಭೂಕಂಪಗಳಿಂದ ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ಸದ್ಯದವರೆಗೆ ತಿಳಿದು ಬಂದಿಲ್ಲ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles