ಬೆಳಗಾಯಿತು ವಾರ್ತೆ
ಬಳ್ಳಾರಿ: ನೂತನವಾಗಿ ಬಿಜೆಪಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅನೀಲ್ ಕುಮಾರ ಮೋಕಾ ಅವರು ಫೆಬ್ರವರಿ 1 ರಂದು ನಗರದ ಪಾರ್ವತಿ ನಗರದಲ್ಲಿರುವ ಬಸವ ಭವನದಲ್ಲಿ ಪದಗ್ರಹಣ ಮಾಡಲಿದ್ದಾರೆ.
ಪದಗ್ರಹಣ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿರುವ ಮಾಜಿ ಸಚಿವರು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿಟಿ ರವಿ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಬಳ್ಳಾರಿ ಲೋಕ ಸಭಾ ಪ್ರಭಾರಿಗಳಾದ ಎನ್ ರವಿಕುಮಾರ ಅವರಿಗೆ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರು ಮತ್ತು ಮುಖಂಡರುಗಳಿಂದ ಅದ್ದೂರಿ ಯಾಗಿ ಸ್ವಾಗತ ಮಾಡಿ ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬೆಳಗ್ಗೆ 10.30 ಕ್ಕೆ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಬೈಕ್ ಮೆರವಣಿಗೆಯೊಂದಿಗೆ ಎಸ್ ಪಿ ವೃತ್ತದ ಮೂಲಕ ಬಸವಭವನ ತಲುಪುವದು. ಬಸವ ಭವನದ ಸಭಾಂಗಣಕ್ಕೆ ವಿಶೇಷ ಆಹ್ವಾನಿತರನ್ನ ಡೊಳ್ಳು ,ಕಂಚಿಮೇಳ ಇತರೆ ಕಲಾ ತಂಡದೊಂದಿಗೆ ಮಹಿಳೆಯರ ಪೂರ್ಣಕುಂಭ ಸ್ವಾಗತ ಮಾಡಲಾಗುತ್ತದೆ.
ನಂತರ ಬೆಳಗ್ಗೆ 11.15 ಕ್ಕೆ ಜಿಲ್ಲಾದ್ಯಕ್ಷರ ಪದಗ್ರಹಣ ಸಮಾರಂಭದ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಮಾಜಿ ಸಚಿವರು ಹಾಗೂ ಹಾಲಿ ಮಾಜಿ ಸಂಸದರು, ಶಾಸಕರು , ಪಕ್ಷದ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.