ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಅನುಕೂಲ

ಬೆಳಗಾಯಿತು ವಾರ್ತೆ
ಬಳ್ಳಾರಿ:
ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರವರು ಭಾರತೀಯ ಜನತಾ ಪಾರ್ಟಿಗೆ ಬಂದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ದನ ರೆಡ್ಡಿ ರವರು ಬಿಜೆಪಿಗೆ ಬಂದರೆ ಮಾಜಿ ಸಚಿವ ಶ್ರೀರಾಮುಲು ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತಾರೆ. ಜನಾರ್ದನ ರೆಡ್ಡಿ ನಮ್ಮ ಭಾಗಕ್ಕೆ ಬಂದರೆ ಒಳ್ಳೆದೆ ಆಗುತ್ತೆ ಎನ್ನುವುದು ನನ್ನ ಭಾವನೆ. ನಾವು ಎಲ್ಲವನ್ನೂ ಮರೆತು, ನಾವೆಲ್ಲರೂ ಸೇರಿ ಬಿಜೆಪಿ ಪಕ್ಷವನ್ನು ಭದ್ರವಾಗಿ ಕಟ್ಟಲು ಸಹಕಾರಿಯಾಗಲಿದೆ ಎಂದು ಸೋಮಶೇಖರ್ ರೆಡ್ಡಿ ರವರು ತಿಳಿಸಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles