ಬಳ್ಳಾರಿ: ಗ್ರಾಹಕರಿಗೆ ಕಲಬೆರಕೆ ಮತ್ತು ನಕಲಿ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷರಾದ ಕಿಶೋರ್ ಬಾಬು ಮನವಿ ಮಾಡಿದರು.
ನಗರದಲ್ಲಿನ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬಳ್ಳಾರಿಯ ಮಾರುಕಟ್ಟೆಯಲ್ಲಿ ನಕಲಿ ಪ್ರಾಡಕ್ಟ್ ಗಳು ಮಾರಾಟ ಹಾವಳಿ ಹೆಚ್ಚಾಗಿದೆ ಇದನ್ನು ಸಂಬಂಧಿಸಿದ ಅಧಿಕಾರಿಗಳು ತಡೆಯಬೇಕು ಎಂದರು.ಕ್ಲಿನಿಕ್ ಪ್ಲಸ್ ಶಾಂಪೂ, ಮೈಸೂರು ಸ್ಯಾಂಡಲ್, ಮುಂತಾದ ನಕಲಿ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಇವೆ. ರಾಜಲಕ್ಷ್ಮಿ ಸ್ಟೂರ್ಸ್ ನಲ್ಲಿ ನಕಲಿ ಪ್ಯಾರಾಚೂಟ್ ಎಣ್ಣೆ ಸಿಕ್ಕಿದ ಪರಿಣಾಮ ಮಾಲೀಕರು ದಿನೇಶ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮರೇಗೌಡ, ಗಿರಿರಾಜ್ ವಿಕ್ರಂ ಸಿಂಹ, ಸಂತೋಷ, ಎರ್ರಿಸ್ವಾಮಿ ಸೋಮಶೇಖರ್ ಸೇರಿದಂತೆ ಮತ್ತಿತರ ಇದ್ದರು.