ಬಳ್ಳಾರಿ: ಮಣಿಪುರದಲ್ಲಿ ಕುಕ್ಕೆ ಸಮುದಾಯದ ಮಹಿಳೆಯರ ಮೇಲೆ ನಡೆಸಿದ ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂರ್ಘಷ ಸಮಿತಿ ಬಳ್ಳಾರಿ ಜಿಲ್ಲಾ ಶಾಖೆ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಮಾನಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕರಾದ ಮಾನಯ್ಯ ಅವರು ಮಾತನಾಡಿ ಮಣಿಪುರದಲ್ಲಿನ ಕುಕ್ಕೆ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಸಮಾಜವೇ ನಾಚಿ ತಲೆತಗ್ಗಿಸುವಂತಹ ಘಟನೆಯಾಗಿದೆ ಇದನ್ನು ತಡೆಯುವಲ್ಲಿ ಬಿಜೆಪಿ ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೂಡಲೇ ಮಣಿಪುರದಲ್ಲಿ ರಾಜ್ಯಪಾಲರ ಆಡಳಿತ ತರಬೇಕು ಎಂದರು.
ಈ ವೇಳೆ ಸಂಡೂರಿನ ಶಾಸಕ ಈ.ತುಕರಾಂ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ ಹೆಚ್ ಬಿ ಗಂಗಪ್ಪ, ಸಿದ್ದೇಶ್,ಮಲ್ಲಯ್ಯ ಸೇರಿದಂತೆ ಮತ್ತಿತರ ಇದ್ದರು