ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ:ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 08 ವಿಧಾನಸಭಾ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಕ್ಷೇತ್ರಗಳ 1,972 ಮತಗಟ್ಟೆಗಳಲ್ಲಿ ಮೇ 07 ಮಂಗಳವಾರದಂದು ಸುಸೂತ್ರ ಹಾಗೂ ಶಾಂತಿಯುತ ಮತದಾನ ನಡೆದಿದ್ದು, ಒಟ್ಟು ಶೇ.73.59 ರಷ್ಟು ಮತದಾನ ಪ್ರಮಾಣವಾಗಿದೆ.
ಬಳ್ಳಾರಿ ಗ್ರಾಮೀಣ – ಶೇ.72.08, ಬಳ್ಳಾರಿ ನಗರ – ಶೇ. 65.12, ಹೂವಿನಹಡಗಲಿ – ಶೇ.75.05, ಹಗರಿಬೊಮ್ಮನಹಳ್ಳಿ- ಶೇ.77.98, ಕಂಪ್ಲಿ – ಶೇ.78.91, ಕೂಡ್ಲಿಗಿ – ಶೇ.76.58, ಸಂಡೂರು – ಶೇ. 75.27, ವಿಜಯನಗರ – ಶೇ.70.33 ರಷ್ಟು ಮತದಾನವಾಗಿದೆ.
ಮತದಾನ ವಿವರ:ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,84,040 ಮತದಾರರಿದ್ದು, ಅದರಲ್ಲಿ 13,86,520 ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ.
928857 ಪುರುಷ ಮತದಾರರಲ್ಲಿ 697349 ಪುರುಷರು (ಶೇ.75.08) ಮತ ಚಲಾಯಿಸಿದ್ದಾರೆ. 954914 ಮಹಿಳಾ ಮತದಾರರಲ್ಲಿ 689056 ಮಹಿಳೆಯರು (ಶೇ.72.16) ಮತದಾನ ಮಾಡಿದ್ದಾರೆ ಮತ್ತು 269 ಅಲ್ಪಸಂಖ್ಯಾತ ಮತದಾರರಲ್ಲಿ 115 ಮಂದಿ (ಶೇ.42.75) ಮತದಾನ ಮಾಡಿದ್ದಾರೆ.