ಬಳ್ಳಾರಿ: ನಿಗದಿತ ಸಮಯಕ್ಕೆ ಸಾಮಾನ್ಯ ಸಭೆಯನ್ನು ಆರಂಭಿಸುವಂತೆ ಪಾಲಿಕೆ ಸದಸ್ಯರಾದ ಇಬ್ರಾಹಿಂ ಅವರು ಆಯುಕ್ತರ ಮತ್ತು ಮೇಯರ್ ಮೇಲೆ ಕಿಡಿಕಾರಿದರು.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಮಂಗಳವಾರ ಮೇಯರ್ ತ್ರಿವೇಣಿ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು ಅಜೆಂಡಾದಲ್ಲಿರುವಂತೆ ನಿಗದಿತ ಸಮಯಕ್ಕೆ ಸಭೆ ಆರಂಭವಾಗದಿರುವುದಕ್ಕೆ ಆಯುಕ್ತರು ಹಾಗೂ ಮೇಯರ್ ಮೇಲೆ ಕಿಡಿಕಾರಿ ಕಾರಣ ಕೇಳಿದರು. ಸಭೆಯಲ್ಲಿ ಶಾಸಕರ ಕಚೇರಿ ಉದ್ಘಾಟನೆ ಹಿನ್ನೆಲೆ ಸಭೆ ಆರಂಭ ತಡವಾಗಿದೆ ಎಂದು ಆಯುಕ್ತರಾದ ರುದ್ರೇಶ್ ತಿಳಿಸಿದರು. ಸಭೆಯನ್ನು ಆರಂಭಿಸಿ ತದನಂತರ ಅವರ ಬಂದು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪ್ರತ್ಯುತ್ತರ ನೀಡಿದರು. ಸಭೆ ಸುಮಾರು ಒಂದು ವರೆ ಗಂಟೆ ತಡವಾಗಿ ಆರಂಭವಾಯಿತು ಆದ್ದರಿಂದ ಕುಪಿತಗೊಂಡರು
ಈ ಸಂದರ್ಭದಲ್ಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ, ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳ ಇದ್ದರು.